ಗಂಭೀರ್ ಹೇಳಿದ್ದು ನಿಜವಾದರೆ ವೈಫಲ್ಯಗಳ ನಡುವೆಯೂ ಕೆ. ಎಲ್ ರಾಹುಲ್‌ಗೆ ಮತ್ತೊಂದು ಅವಕಾಶ
ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾದರೆ ಬಮ್ರಾ ತಂಡವನ್ನು ಮನ್ನಡೆಸಲಿದ್ದಾರೆ ಹಾಗೂ ಕೆ. ಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಕೋಚ್ ಗಂಭೀರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಕೆ. ಎಲ್ ರಾಹುಲ್‌ಗೆ ಅವಕಾಶವೊಂದು ಸಿಗಬಹುದೇ ಎಂಬ ಆಶಾಭಾವನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಯಾಕೆಂದರೆ ಪ್ರವಾಸ ಹೊರಡುವ ಮೊದಲು ಹೆಡ್ ಕೋಚ್ ಗೌತಮ್ ಗಂಭೀರ್ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಒಂದು ಭರವಸೆ ಸಿಕ್ಕಿದೆ. ಅವರು ತಂಡದ ಓಪನಿಂಗ್ ಬ್ಯಾಟರ್ ಆಗಿರುತ್ತಾರೆ ಎಂಬ ಅಭಯ ದೊರಕಿದೆ.
ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾದರೆ ಬಮ್ರಾ ತಂಡವನ್ನು ಮನ್ನಡೆಸಲಿದ್ದಾರೆ ಹಾಗೂ ಕೆ. ಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ರಾಹುಲ್‌ಗೆ ಸ್ಪರ್ಧೆಯೊಡ್ಡಲು ಅಭಿಮನ್ಯು ಈಶ್ವರ್ ಕೂಡ ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಕೆಎಲ್ ರಾಹುಲ್ ಅವರ ಅನುಭವವನ್ನು ವಿದೇಶಿ ನೆಲದಲ್ಲಿ ಪರಿಗಣಿಸಲಾಗುವುದು ಎಂದ ಮಾಜಿ ಆರಂಭಿಕ ಆಟಗಾರ ಸೂಚನೆ ನೀಡಿದ್ದಾರೆ. ಭಾರತ ತಂಡದ ಎರಡನೇ ಬ್ಯಾಚ್ ಸೋಮವಾರ ಪರ್ತ್‌ಗೆ ತೆರಳಲಿದ್ದು, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ರೋಹಿತ್ ಮೊದಲ ಟೆಸ್ಟ್ ಗೆ ಅಲಭ್ಯರಾಗುತ್ತಾರೆ ಎಂಬ ಸುದ್ದಿಯಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್, ಅವರ ಆರಂಭಿಕ ಸ್ಥಾನಕ್ಕೆ ರಾಹುಲ್ ಅನುಭವ ಪರಿಗಣಿಸುವುದಾಗಿ ಹೇಳಿದ್ದಾರೆ.
Very few batters can adapt to any batting position, and @klrahul is one of them 🫡
🗣 Head Coach @GautamGambhir backs #KLRahul as a reliable team man and potential opener in the 1st Test 🙌🏼
📺 Don’t miss 👉 #AUSvINDonStar, 1st Test starts FRI 22 NOV, 7 AM on Star Sport pic.twitter.com/1vfP57G3Ge
ಈ ಸಮಯದಲ್ಲಿ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ. ಆದರೆ ಪರಿಸ್ಥಿತಿ ಏನು ಎಂದು ನಾವು ನಿಮಗೆ ತಿಳಿಸುತ್ತೇವೆ. ರೋಹಿತ್ ಲಭ್ಯವಿರುತ್ತಾರೆ ಎಂದೇ ಆಶಿಸುತ್ತೇವೆ, ಆದರೆ ಸರಣಿಯ ಪ್ರಾರಂಭದ ಮೊದಲು ಎಲ್ಲವನ್ನೂ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
"ಬುಮ್ರಾ ಈಗ ತಂಡದ ಉಪನಾಯಕರಾಗಿದ್ದಾರೆ. ಆದ್ದರಿಂದ ನಿಸ್ಸಂಶಯವಾಗಿ ಅವರು ತಂಡವನ್ನು ಮುನ್ನಡೆಸುತ್ತಾರೆ. ರೋಹಿತ್ ಲಭ್ಯವಿಲ್ಲದಿದ್ದರೆ, ಅವರು ಪರ್ತ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ, "ಎಂದು ಗಂಭೀರ್ ಹೇಳಿಕೆ ನೀಡಿದ್ದಾರೆ .
ರಾಹುಲ್‌ಗೆ ಒಲಿಯುವುದೇ ಅದೃಷ್ಟ?
ರೋಹಿತ್ ಅನುಪಸ್ಥಿತಿಯು ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನ ಖಾಲಿಯಾಗುತ್ತದೆ. ಭಾರತ ಎ ಪರ ಆಸ್ಟ್ರೇಲಿಯಾ ಎ ವಿರುದ್ಧದ ಟೆಸ್ಟ್‌ಗಳಲ್ಲಿ ಆಡಿದ ಇನ್ನೂ ಭಾರತ ತಂಡದ ಕ್ಯಾಪ್ ಧರಿಸದ ಅಭಿಮನ್ಯು ಈಶ್ವರನ್ ಅಥವಾ ಕೆಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ಗಂಭೀರ್ ಹೇಳಿದ್ದಾರೆ.
ನಿಸ್ಸಂಶಯವಾಗಿ, ಈಶ್ವರನ್ ಮುಂಚೂಣಿಯಲ್ಲಿದ್ದಾರೆ. ಅಲ್ಲಿ (ಆಸ್ಟ್ರೇಲಿಯಾದಲ್ಲಿ) ಕೆ.ಎಲ್ ಕೂಡ ಇದ್ದಾರೆ. ರೋಹಿತ್ ಲಭ್ಯವಿಲ್ಲದಿದ್ದರೆ ನಾವು ಪಂದ್ಯಕ್ಕೆ ಮೊದಲು ಅವರನ್ನು ಕರೆಉಯುತ್ತೇವೆ, "ಎಂದು ಗಂಭೀರ್ ಹೇಳಿದ್ದಾರೆ .
ಯಾವುದೇ ಆಯ್ಕೆಗಳಿಲ್ಲ ಎಂದಲ್ಲ. ಸದ್ಯಕ್ಕೆ ಸಾಕಷ್ಟು ಆಯ್ಕೆಗಳಿವೆ. ಮೊದಲ ಟೆಸ್ಟ್ ಪಂದ್ಯಕ್ಕೆ ಹತ್ತಿರವಾದ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ತಯಾರಿಸಲು ಯೋಜನೆ ಹಾಕುತ್ತೇವೆ , "ಎಂದು ಅವರು ಹೇಳಿದರು. ಆದಾಗ್ಯೂ ರಾಹುಲ್ ಅವರ ಅನುಭವವು ಈಶ್ವರನ್ ಅವರ ಪ್ರಸ್ತುತ ಫಾರ್ಮ್‌ಗಿಂತ ಮೇಲುಗೈ ಸಾಧಿಸಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
"ಹೌದು, ನಾವು ಅನುಭವಿ ಆಟಗಾರರೊಂದಿಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಅವರು (ರಾಹುಲ್) ನಿಜವಾಗಿಯೂ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು ಮತ್ತು ಅವರು ನಿಜವಾಗಿಯೂ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು" ಎಂದು ಗಂಭೀರ್ ಹೇಳಿಕ ನೀಡಿದ್ದಾರೆ.
"ವಿದೇಶಿ ಪಿಚ್‌ನಲ್ಲಿ ಉತ್ತಮವಾಗಿ ಆಡಲು ಸಾಕಷ್ಟು ಪ್ರತಿಭೆ ಬೇಕಾಗುತ್ತದೆ. ಕೆಎಲ್ ಅವರಂತಹ ಆಟಗಾರರು ನಿಜವಾಗಿಯೂ ಬ್ಯಾಟಿಂಗ್ ಆರಂಭಿಸಬಲ್ಲರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು. ರಾಹುಲ್ ನಮಗಾಗಿ ಆಡಬಹುದು ಎಂದು ಗಂಭೀರ್ ಹೇಳಿದ್ದಾರೆ.
ರಾಹುಲ್‌ಗೆ ʼರಾಹು ಕಾಲʼ
ಕಳೆದ ಕೆಲವು ತಿಂಗಳಿಂದ ಕೆ. ಎಲ್ ರಾಹುಲ್‌ಗೆ ʼರಾಹು ಕಾಲʼ ಅವರು ಉತ್ತಮ ಫಾರ್ಮ್‌ನಲ್ಲಿ ಇಲ್ಲ. ಅವರ ಬ್ಯಾಟಿಂಗ್ ಮೊನಚು ಕಳೆದುಕೊಂಡಿದೆ. ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಟೀಕೆಗಳು ವ್ಯಕ್ತಗೊಳ್ಳುತ್ತಿವೆ. ಅತ್ಯಂತ ಕಳಪೆ ರೀತಿಯಲ್ಲಿ ಔಟಾಗುವುದು. ಛಾತಿಯೇ ಇಲ್ಲದೆ ಬ್ಯಾಟಿಂಗ್ ಮಾಡುವ ಅವರ ಆಟದ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಹುಲ್‌ಗೂ ಭಾರತ ತಂಡದ ಬಾಗಿಲು ಮುಚ್ಚುವ ಎಲ್ಲ ಸಾಧ್ಯತೆಗಳಿವೆ. ಆದಾಗ್ಯೂ ರೋಹಿತ್ ಅನುಪಸ್ಥಿತಿ ಅವರಿಗೊಂದು ಅವಕಾಶ ಸೃಷ್ಟಿ ಮಾಡಿಕೊಡಬಹುದು ಎನ್ನಲಾಗುತ್ತಿದೆ.
ನಿತೀಶ್ ಉತ್ತಮ ಆಯ್ಕೆ ಎಂದ ಕೋಚ್
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21 ಬ್ಯಾಟಿಂಗ್ ಸರಾಸರಿ ಹೊಂದಿರುವ ಮತ್ತು ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಅನುಭವಿ ವೇಗದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಆಯ್ಕೆ ಮಾಡದಿರುವ ಬಗ್ಗೆಯೂ ಗಂಭೀರ್ ಸಮರ್ಥನೆ ನೀಡಿದರು. ಅವರ ಬದಲಿಗೆ ಅನ್‌ಕ್ಯಾಪ್ಟ್ ನಿತೀಶ್ ಕುಮಾರ್ ರೆಡ್ಡಿ ಉತ್ತಮ ಎಂದು ಹೇಳಿದರು .
"ಇದು ಭವಿಷ್ಯದ ಬಗ್ಗೆಯೂ ಹೌದು. ದೇಶಕ್ಕಾಗಿ ಕೆಲಸ ಮಾಡಲು ನಾವು ಆಯ್ಕೆ ಮಾಡಿದ ಅತ್ಯುತ್ತಮ ಆಟಗಾರರ ಗುಂಪು ಇದು ಎಂದು ನಾನು ಭಾವಿಸುತ್ತೇನೆ" ಎಂದು ಗಂಭೀರ್ ಶಾರ್ದೂಲ್ ತೆ ಸದ್ಯಕ್ಕೆ ತಂಡದ ಬಾಗಿಲು ಮುಚ್ಚಲಾಗಿದೆ ಎಂಬುದನ್ನು ಹೇಳಿದರು.
ಹಿಂದಿನ ಸರಣಿಯಲ್ಲಿ ಗಬ್ಬಾದಲ್ಲಿ ವಿಕೆಟ್‌ಗಳ ಜತೆಗೆ ಅರ್ಧ ಶತಕ ಬಾರಿಸಿದ್ದ ಶಾರ್ದೂಲ್ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯವಿದೆ. ಹೀಗಾಗಿ ಗಂಭೀರ್ ಸಮಜಾಯಿಷಿ ಕೊಟ್ಟಿದಾರೆ.
"ನಮಗಾಗಿ ಕೆಲಸ ಮಾಡಬಲ್ಲ ಅತ್ಯುತ್ತಮ ತಂಡವನ್ನು ನಾವು ಆಯ್ಕೆ ಮಾಡಿದ್ದೇವೆ. ನಿತೀಶ್ ರೆಡ್ಡಿ, ಅವರು ನಂಬಲಾಗದಷ್ಟು ಪ್ರತಿಭಾವಂತರು ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಒಂದು ಆಯ್ಕೆಯನ್ನು ನೀಡಿದರೆ, ಅವರು ನಮಗಾಗಿ ಪ್ರದರ್ಶನ ನೀಡುತ್ತಾರೆ"ಎಂದು ಗಂಭೀರ್ ಆಂಧ್ರ ಆಟಗಾರನನ್ನು ಬೆಂಬಲಿಸುವುದನ್ನು ಮುಂದುವರಿಸಿದರು.
10 ದಿನಗಳ ತರಬೇತಿ ಬೇಕು
ಸೋಮವಾರ ಭಾರತೀಯ ತಂಡದ ಎರಡನೇ ಬ್ಯಾಚ್ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಲಿದೆ. ಮುಂದಿನ 10 ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ತಂಡಕ್ಕೆ ಅತ್ಯಗತ್ಯ ಎಂದು ಗಂಭೀರ್ ಹೇಳಿದ್ದಾರೆ.
"ನಮ್ಮಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅವರು ಸಾಕಷ್ಟು ಬಾರಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ಅವರ ಅನುಭವವು ಯುವ ಆಟಗಾರರಿಗೂ ಉಪಯುಕ್ತವಾಗಲಿದೆ. ಈ 10 ದಿನಗಳು ಬಹಳ ನಿರ್ಣಾಯಕವಾಗಲಿವೆ. 22ನೇ ತಾರಿಕು ಬೆಳಿಗ್ಗ , ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂದು ಗಂಭೀರ್ ಹೇಳಿದ್ದಾರೆ