ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಸೋಲು; ಕ್ರಿಕೆಟ್​ ಪ್ರೇಮಿಗಳಿಗೆ ದುಃಖದ ಭಾನುವಾರ
x

ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಸೋಲು; ಕ್ರಿಕೆಟ್​ ಪ್ರೇಮಿಗಳಿಗೆ ದುಃಖದ ಭಾನುವಾರ

ಹಿರಿಯ ಪುರುಷರ, ಮಹಿಳೆಯರ ಮತ್ತು 19 ವರ್ಷದೊಳಗಿನವರ ಮೂರು ರಾಷ್ಟ್ರೀಯ ತಂಡಗಳು ತಮ್ಮ ತಮ್ಮ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದೆ.


ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಭಾನುವಾರ (ಡಿಸೆಂಬರ್​ 8) ಮರೆಯಲಾಗದ ದಿನ. ಭಾರತ ಹಾಗೂ ವಿಭಿನ್ನ ತಂಡಗಳ ವಿರುದ್ಧ ಮೂರು ಪಂದ್ಯಗಳು ನಡೆದಿದ್ದು ಎಲ್ಲದರಲ್ಲೂ ಭಾರತ ಸೋತಿದೆ. ಹಿರಿಯ ಪುರುಷರ, ಮಹಿಳೆಯರ ಮತ್ತು 19 ವರ್ಷದೊಳಗಿನವರ ಮೂರು ರಾಷ್ಟ್ರೀಯ ತಂಡಗಳು ತಮ್ಮ ತಮ್ಮ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದೆ.

ಅಡಿಲೇಡ್​ನಲ್ಲಿ ನಡೆದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್​ಗಳ ಸೋಲು ಅನುಭವಿಸಿದರೆ, ಬ್ರಿಸ್ಬೇನ್​​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಆಸ್ಟ್ರೇಲಿಯಾ ವಿರುದ್ಧ 122 ರನ್​ಗಳಿಂದ ಸೋತು ಮೂರು ಪಂದ್ಯಗಳ ಸರಣಿಯಲ್ಲಿ 2-0 ಹಿನ್ನಡೆ ಕಂಡಿತು.

ಪುರುಷರ ತಂಡ ಪರ್ತ್​ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯವನ್ನು ಭಾರತ 295 ರನ್​ಗಳಿಂದ ಗೆದ್ದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಈಗ 1-1 ಸಮಬಲದಲ್ಲಿದೆ. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ ಬ್ರಿಸ್ಬೇನ್​ನಲ್ಇ ನಡೆಯಲಿದೆ.

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 59 ರನ್​​ಳಿಂದ ಸೋತಿತು.

19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಭಾರತ 35.2 ಓವರ್​ಗಳಲ್ಲಿ ಕೇವಲ 139 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಬಾಂಗ್ಲಾದೇಶ ತಂಡ 199 ರನ್​ಗಳನನ್ನು ಪೇರಿಸಿತ್ತು.

Read More
Next Story