Champion RCB : ಐಪಿಎಲ್​ನಲ್ಲಿ ಈ ಸಲ ಕಪ್ ನಮ್ದೇ ಕನಸು ನಿಜ! ವಿರಾಟ್ ಕೊಹ್ಲಿಗೆ ಆನಂದಭಾಷ್ಪದ ವಿಜಯ
x

Champion RCB : ಐಪಿಎಲ್​ನಲ್ಲಿ 'ಈ ಸಲ ಕಪ್ ನಮ್ದೇ' ಕನಸು ನಿಜ! ವಿರಾಟ್ ಕೊಹ್ಲಿಗೆ ಆನಂದಭಾಷ್ಪದ ವಿಜಯ

ಇದರೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ 18 ವರ್ಷಗಳ ದೀರ್ಘ ಕನಸು ಅಂತಿಮವಾಗಿ ನನಸಾಗಿದೆ.


18 ವರ್ಷಗಳ ಕಾತರ. ನಿರಾಸೆ ಮತ್ತು ಹೃದಯವಿದ್ರಾವಕ ಸೋಲುಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರ ಟ್ರೋಫಿ ಗೆದ್ದುಕೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜೂನ್ 4ರಂದು ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ 6 ರನ್​ಗಳ ವಿಜಯ ಸಾಧಿಸಿದ ಮೆನ್​ ಇನ್​ ರೆಡ್​ ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿತು.

ಇದರೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ 18 ವರ್ಷಗಳ ದೀರ್ಘ ಕನಸು ಅಂತಿಮವಾಗಿ ನನಸಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಐತಿಹಾಸಿಕ ಪಂದ್ಯವು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು. ಜೊತೆಗೆ ತಂಡದ ಸಂಘಟಿತ ಪ್ರದರ್ಶನವು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿತು.

Read More
Next Story