BCCI announces annual contracts, Shreyas, Ishan Kishan added
x

ಸಾಂಧರ್ಬಿಕ ಚಿತ್ರ (ಎಕ್ಸ್​ ಖಾತೆಯಿಂದ)

BCCI Central Contract | ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ, ಶ್ರೇಯಸ್, ಇಶಾನ್‌ ಕಿಶನ್‌ ಸೇರ್ಪಡೆ

BCCI Central Contract | ಬಿಸಿಸಿಐ ತನ್ನ ವಾರ್ಷಿಕ ಗುತ್ತಿಗೆ ಪ್ರಕಟಿಸಿದ್ದು ಗುತ್ತಿಗೆ ಕಳೆದುಕೊಂಡಿದ್ದ ಶ್ರೇಯಸ್‌ ಅಯ್ಯರ್‌ ಹಾಗೂ ವಿಕೇಟ್‌ ಕೀಪರ್‌ ಬ್ಯಾಟ್ಸ್ಮನ್‌ ಇಶಾನ್‌ ಕಿಶಾನ್‌ ಪುನಃ ಸೇಪಡೆಯಾಗಿದ್ದಾರೆ.


ಬಿಸಿಸಿಐ ತನ್ನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಸೋಮವಾರ (ಏಪ್ರಿಲ್ 21) ಪ್ರಕಟಿಸಿದ್ದು, ಕಳೆದ ವರ್ಷ ಒಪ್ಪಂದ ಕಳೆದುಕೊಂಡಿದ್ದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್‌ ಅಯ್ಯರ್‌ ಹಾಗೂ ವಿಕೆಟ್‌ಕೀಪರ್‌ ಬ್ಯಾಟರ್​ ಇಶಾನ್‌ ಕಿಶಾನ್‌ ಪುನಃ ಸೇರ್ಪಡೆಯಾಗಿದ್ದಾರೆ. ಅವರಿಬ್ಬರು ಕಳೆದ ವರ್ಷ ಬಿಸಿಸಿಐ ಸೂಚನೆಯ ಹೊರತಾಗಿಯೂ ದೇಶಿಯ ಕ್ರಿಕೆಟ್‌ನಲ್ಲಿ ಭಾಗವಹಿಸದೇ ಐಪಿಎಲ್ ಆಡಿದ್ದರ ಪರಿಣಾಮವಾಗಿ ಗುತ್ತಿಗೆ ಕಳೆದುಕೊಂಡಿದ್ದರು.

ಟಿ20 ವಿಶ್ವಕಪ್‌ ಗೆದ್ದ ನಂತರ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ. ನಾಯಕ ರೋಹಿತ್‌ ಶರ್ಮಾ. ಆಲ್‌ ರೌಂಡರ್‌ ರವೀಂದ್ರ ಜಡೇಜಾ ಈ ಮಾದರಿಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಅವರು ಏಕದಿನ ಹಾಗೂ ಟೆಸ್ಟ್‌ ಮಾದರಿಯಲ್ಲಿ ಮುಂದುವರಿದಿದ್ದಾರೆ. ಆದರೂ ಅವರನ್ನು ಎ ಪ್ಲಸ್‌ ಶ್ರೇಣಿಯಲ್ಲಿ ಮುಂದುವರಿಸಿದ್ದು ಮೂರು ಮಾದರಿಯಲ್ಲಿ ಮಿಂಚುತ್ತಿರುವ ಜಸ್ಪ್ರಿತ್‌ ಬುಮ್ರಾ ಕೂಡ ಈ ಪಟ್ಟಿಯಲ್ಲಿದ್ದು ವಾರ್ಷಿಕ ಏಳು ಕೋಟಿ ವೇತನ ಪಡೆಯಲಿದ್ದಾರೆ.

ಗ್ರೇಡ್‌ ಎ ಗುತ್ತಿಗೆ ಪಡೆದ ಆಟಗಾರರು ವಾರ್ಷಿಕ ಐದು ಕೋಟಿ ವೇತನ ಪಡೆಯಲಿದ್ದು ವೇಗದ ಬೌಲರ್‌ ಮೊಹಮದ್‌ ಸಿರಾಜ್. ವಿಕೆಟ್​ಕೀಪರ್‌ ಬ್ಯಾಟ್ಸ್​ಮನ್​ ಕನ್ನಡಿಗ ಕೆ.ಎಲ್.‌ ರಾಹುಲ್, ಆರಂಭಿಕ ಬ್ಯಾಟ್ಸ್​​ಮನ್​ ಶುಭಮನ್‌ ಗಿಲ್‌, ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ. ಹಿರಿಯ ವೇಗಿ ಮೊಹಮದ್‌ ಶಮಿ ಹಾಗೂ ವಿಕೆಟ್​​ಕೀಪರ್‌ ಬ್ಯಾಟ್ಸಮನ್‌ ರಿಷಬ್‌ ಪಂತ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಗ್ರೇಡ್‌ ಬಿ ಗುತ್ತಿಗೆ ಪಡೆದಿದ್ದು ಮೂರು ಕೋಟಿ ವೇತನ ಪಡೆಯಲಿದ್ದಾರೆ. ಈ ಪಟ್ಟಿಯಲ್ಲಿ ಸ್ಪಿನ್ನರ್‌ ಕುಲದೀಪ್‌ ಯಾದವ್‌. ಆಲ್‌ ರೌಂಡರ್‌ ಅಕ್ಷರ್‌ ಪಟೇಲ್‌. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಹಾಗೂ ಕಳೆದ ವರ್ಷ ಗುತ್ತಿಗೆ ಕಳೆದುಕೊಂಡಿದ್ದ ಶ್ರೇಯಸ್‌ ಅಯ್ಯರ್‌ ಸ್ಥಾನ ಪಡೆದು ಮತ್ತೊಮ್ಮೆ ಒಪ್ಪಂದಪಟ್ಟಿಗೆ ಮರಳಿದ್ದಾರೆ.

ಗ್ರೇಡ್‌ ಸಿ ಗುತ್ತಿಗೆ ಹೊದಿರುವವರ ಪಟ್ಟಿಯಲ್ಲಿ ಕನ್ನಡಿಗ ಪ್ರಸಿದ್ಧ್‌ ಕೃಷ್ಣ. ರಿಂಕು ಸಿಂಗ್‌. ತಿಲಕ್‌ ವರ್ಮಾ. ಋತುರಾಜ್‌ ಗಾಯಕ್ವಾಡ್‌. ಶಿವಂ ದುಬೆ. ರವಿ ಬಿಷ್ಣೋಯಿ. ವಾಷಿಂಗ್ಟನ್​ ಸುಂದರ್‌. ಮುಕೇಶ್‌ ಕುಮಾರ್.‌ ಸಂಜು ಸ್ಯಾಮ್ಸನ್. ಅರ್ಷದೀಪ್‌ ಸಿಂಗ್‌. ರಜತ್‌ ಪಟಿದಾರ್.‌ ಧ್ರುವ ಜುರೇಲ್‌. ಸರ್ಫರಾಜ್‌ ಖಾನ್‌. ನಿತೀಶ್‌ ಕುಮಾರ್‌ ರೆಡ್ಡಿ. ಅಭಿಷೇಕ್‌ ಶರ್ಮಾ. ಆಕಾಶ್‌ ದೀಪ್.‌ ವರುಣ್‌ ಚಕ್ರವರ್ತಿ. ಹರ್ಷಿತ್‌ ರಾಣಾ ಇದ್ದಾರೆ. ಇವರ ಜತೆಗೆ ಕಳೆದ ಬಾರಿ ಗುತ್ತಿಗೆ ಕಳೆದುಕೊಂಡಿದ್ದ ಇಶಾನ್‌ ಕಿಶಾನ್‌ ಸೇರ್ಪಡೆಯಾಗಿದ್ದು, ವಾರ್ಷಿಕ ಒಂದು ಕೋಟಿ ವೇತನ ಪಡೆಯಲಿದ್ದಾರೆ.

Read More
Next Story