ಬಿಡುಗಡೆಯಾಗಿ ತಿಂಗಳಲ್ಲೇ ಓಟಿಟಿಗೆ ಬಂತು ʼಯುವʼ
x
ಯುವ ಸಿನಿಮಾ

ಬಿಡುಗಡೆಯಾಗಿ ತಿಂಗಳಲ್ಲೇ ಓಟಿಟಿಗೆ ಬಂತು ʼಯುವʼ

ಯುವ ಸಿನಿಮಾ ಬಿಡುಗಡೆಯಾದ 22 ದಿನಕ್ಕೆ ಒಟಿಟಿಗೆ ಬಂದಿದ್ದು, ಯುವ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ.


Click the Play button to hear this message in audio format

ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ʼಯುವʼ ಚಿತ್ರಮಂದಿರಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಈ ನಡುವೆ, ಇದೇ ಸಿನಿಮಾ ಒಟಿಟಿ ಕಡೆ ಆಗಮಿಸಿದೆ.

ಯುವ ಸಿನಿಮಾ ಬಿಡುಗಡೆಯಾದ 22 ದಿನಕ್ಕೆ ಒಟಿಟಿಗೆ ಬಂದಿದ್ದು, ಯುವ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ. ಅದರಂತೆ ಶುಕ್ರವಾರದಿಂದಲೇ ಅಮೆಜಾನ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಆದರೆ, ಈ ಸಿನಿಮಾ ಸದ್ಯ ಎಲ್ಲರಿಗೂ ವೀಕ್ಷಣೆಗೆ ಲಭ್ಯವಿಲ್ಲ. ಬದಲಿಗೆ ಪ್ರೈಂನಲ್ಲೂ ಹಣ ಪಾವತಿಸಿ ಸಿನಿಮಾ ನೋಡಬೇಕಿದೆ. ಬರೋಬ್ಬರಿ 349 ರೂಪಾಯಿ ನೀಡಿ ಸಿನಿಮಾ ವೀಕ್ಷಿಸಬಹುದಾಗಿದೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದರೆ, ಶ್ರೀಶಾ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂತೋಷ್ ಆನಂದ್‌ರಾಮ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, 'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್‌ ಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

Read More
Next Story