ಮಮ್ಮುಟ್ಟಿಯೊಂದಿಗೆ ತೆರೆ ಹಂಚಿಕೊಂಡ ರಾಜ್‌.ಬಿ ಶೆಟ್ಟಿ
x
ರಾಜ್‌ ಬಿ ಶೆಟ್ಟಿ

ಮಮ್ಮುಟ್ಟಿಯೊಂದಿಗೆ ತೆರೆ ಹಂಚಿಕೊಂಡ ರಾಜ್‌.ಬಿ ಶೆಟ್ಟಿ

ಮಮ್ಮುಟ್ಟಿ ಸ್ವತಃ ನಿರ್ಮಿಸಿ ನಟಿಸುತ್ತಿರುವ 'ಟರ್ಬೋ' ಚಿತ್ರದ ಮುಖ್ಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.


Click the Play button to hear this message in audio format

ʻಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ನಟ -ನಿರ್ದೇಶಕ ರಾಜ್ ಬಿ.ಶೆಟ್ಟಿ ಅವರು ಇದೀಗ ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರತೀಯ ಸಿನಿರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಮಮ್ಮುಟ್ಟಿ ಸ್ವತಃ ನಿರ್ಮಿಸಿ ನಟಿಸುತ್ತಿರುವ 'ಟರ್ಬೋ' ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಭಾನುವಾರ (ಮೇ 12) ದುಬೈನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಭಾಗಿಯಾಗಿದ್ದಾರೆ. ಮಲಯಾಳಂ ನಲ್ಲಿ ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಖ್ಯಾತ ಬರಹಗಾರ ಮಿಥುನ್ ಮ್ಯಾನುವಲ್ ಥಾಮಸ್ ಅವರ ಕತೆಯಿದೆ. ಮಮ್ಮುಟ್ಟಿಯವರ ಒಡೆತನದ 'ಮಮ್ಮುಟ್ಟಿ ಕಂಪನಿ' ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ.

ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ 'ಲೈಟರ್ ಬುದ್ಧ ಫಿಲಂಸ್' ಹಂಚಿಕೆ ಮಾಡುತ್ತಿದೆ.

Read More
Next Story