OTT ಗೆ ಬಂತು 'ರವಿಕೆ ಪ್ರಸಂಗ' ಸಿನಿಮಾ
ರವಿಕೆಯನ್ನು ಹೊಲಿಸಲು ಟೈಲರ್ ಬಳಿ ತೆರಳಿದಾಗ ಉಂಟಾಗುವ ತಿರುವುಗಳ ಬಗ್ಗೆ ಚಿತ್ರವು ಹೇಳುತ್ತದೆ.
ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ `ರವಿಕೆ ಪ್ರಸಂಗ’ ಏಪ್ರಿಲ್ 23 ರಂದು ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಸಂತೋಷ್ ಕೊಡಂಕೇರಿ ನಿರ್ದೇಶಿಸಿದ್ದು, ಅವರ ಪತ್ನಿ ಪಾವನ ಬರೆದ ಕಥೆಯನ್ನು ಆಧರಿಸಿದೆ. ಪಾವನಾ ಅವರೇ ಚಿತ್ರದ ಸಂಭಾಷಣೆಯನ್ನೂ ಬರೆದಿದ್ದಾರೆ. ಚಿತ್ರದಲ್ಲಿ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ನಿರ್ವಹಿಸಿದ ನಾಯಕಿಯ ಸುತ್ತ ಸುತ್ತುತ್ತದೆ.
ಗೀತಾ ಸಾನ್ವಿ ಸಂಪಾಜೆ ಎಂಬ ಅವಿವಾಹಿತ ಮಹಿಳೆ ಡಿಸೈನರ್ ರವಿಕೆಯನ್ನು ಧರಿಸಲು ಬಯಸುತ್ತಾರೆ ಮತ್ತು ರವಿಕೆಯನ್ನು ಹೊಲಿಸಲು ಟೈಲರ್ ಬಳಿ ತೆರಳಿದಾಗ ಉಂಟಾಗುವ ತಿರುವುಗಳ ಬಗ್ಗೆ ಚಿತ್ರವು ಹೇಳುತ್ತದೆ. ಈ ಘಟನೆಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಹಿಂದಿನ ಸಂಭಾಷಣೆಯಲ್ಲಿ ಮಾತನಾಡಿದ್ದ ಸಂತೋಷ್, ಮಹಿಳೆಯರು ತಮ್ಮ ಬ್ಲೌಸ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ರವಿಕೆ ವಿನ್ಯಾಸವು ತಪ್ಪಾದಾಗ ಏನಾಗುತ್ತದೆ ಎಂಬುದನ್ನು ಚಲನಚಿತ್ರವು ತೆರೆದಿಡುತ್ತದೆ. ಈ ಅಂಶವು ಚಿತ್ರದ ಆತ್ಮವಾಗುತ್ತದೆ. ಮಾನಸಿಕ ನೋವು, ಸಾಮಾಜಿಕ ಗ್ರಹಿಕೆಗಳು ಮತ್ತು ಮಹಿಳೆಯರ ಕನಸುಗಳು ಸೇರಿದಂತೆ ಬ್ಲೌಸ್‌ಗಳ ಸುತ್ತಲಿನ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುತ್ತದೆ ಎಂದಿದ್ದರು.
ಚಿತ್ರದಲ್ಲಿ ಸುಮನ್ ರಂಗನಾಥ್ ನ್ಯಾಯಾಧೀಶೆಯಾಗಿ, ರಾಕೇಶ್ ಮೈಯ್ಯ ವಕೀಲರಾಗಿ, ಸಂಪತ್ ಮೈತ್ರಿಯಾ ಟೈಲರ್ ಆಗಿ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕಾಟಾರ್, ಪ್ರವೀಣ್ ಅಥರ್ವ, ರಘು ಪಾದೇಶ್ವರ್, ಖುಷಿ ಆಚಾರ್ ಮತ್ತು ರಾಹು ಪಾದೇಶ್ವರ್ ಮುಂತಾದವರು ನಟಿಸಿದ್ದಾರೆ. ರವಿಕೆ ಪ್ರಸಂಗ ಚಿತ್ರಕ್ಕೆ ಮುರಳೀಧರ್ ಎನ್. ಅವರ ಛಾಯಾಗ್ರಹಣವಿದೆ.