ಅರುಣ್‌ ಕುಮಾರ್ ಜೊತೆ ಸಪ್ತಪದಿ ತುಳಿದ ಮಾನ್ವಿತಾ ಕಾಮತ್
x
ಅರುಣ್ ಜೊತೆ ಸಪ್ತಪದಿ ತುಳಿದ ನಟಿ ಮಾನ್ವಿತಾ ಕಾಮತ್

ಅರುಣ್‌ ಕುಮಾರ್ ಜೊತೆ ಸಪ್ತಪದಿ ತುಳಿದ ಮಾನ್ವಿತಾ ಕಾಮತ್

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್ ಇಂದು ಚಿಕ್ಕಮಗಳೂರಿನ ಕಳಸದಲ್ಲಿ ಹಸೆಮಣೆ ಏರಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್ ಇಂದು (ಮೇ 1) ಚಿಕ್ಕಮಗಳೂರಿನ ಕಳಸಾದಲ್ಲಿ ಹಸೆಮಣೆ ಏರಿದ್ದಾರೆ.

ಐಟಿ ಪ್ರೊಫೆಶನಲ್ ಕಮ್ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ಅರುಣ್ ಜೊತೆ ಇತ್ತೀಚೆಗೆ ಮಾನ್ವಿತಾ ಕಾಮತ್ ಮದುವೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ತನ್ನ ಊರು ಕಳಸಾದಲ್ಲಿ ಮದುವೆ ಆಗಬೇಕು ಎಂದು ಇಷ್ಟ ಪಟ್ಟಿದ್ದರು. ಅದರಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸಾದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗಿದೆ. ಎರಡೂ ಕುಟುಂಬಗಳ ಸದಸ್ಯರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಈ ಸೆಲೆಬ್ರೆಟಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ಮಾನ್ವಿತಾ ಕಾಮತ್ ಮದುವೆ ನಡೆದಿದೆ.

ಮಾನ್ವಿತಾ ಕಾಮತ್ ಮದುವೆಗೆ ಸ್ಯಾಂಡಲ್‌ವುಡ್ ಕೆಲವು ಆತ್ಮೀಯರ ತಾರೆಯರು ಭಾಗಿಯಾಗಿದ್ದರು. ನಟಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ನಿರೂಪಕ ನಿರಂಜನ್ ದೇಶಪಾಂಡೆ ಸೇರಿದಂತೆ ಹಲವರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಳೆದ ಎರಡು ದಿನಗಳಿಂದ ಮದುವೆ ಶಾಸ್ತ್ರಗಳು ಕಳಸದಲ್ಲಿಯೇ ನಡೆದಿತ್ತು. ಅರಿಶಿನ ಶಾಸ್ತ್ರ, ಮೆಹಂದಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು.

Read More
Next Story