ದುನಿಯಾ ವಿಜಯ್‌ ಸಿನಿಮಾ ವಿಕೆ29 ಗೆ ಮುಹೂರ್ತ
x
ವಿಕೆ-29' ಅಧಿಕೃತ ಪೋಸ್ಟರ್ ಬಿಡುಗಡೆಯಾಗಿದೆ.

ದುನಿಯಾ ವಿಜಯ್‌ ಸಿನಿಮಾ ವಿಕೆ29 ಗೆ ಮುಹೂರ್ತ

ದುನಿಯಾ ವಿಜಯ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಕಾಂಬಿನೇಷನ್‌ನ ಹೊಸ ಸಿನಿಮಾ ವಿಕೆ29 ಗೆ ಮುಹೂರ್ತ ನೆರವೇರಿದೆ.


Click the Play button to hear this message in audio format

ದುನಿಯಾ ವಿಜಯ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಕಾಂಬಿನೇಷನ್‌ನ ಹೊಸ ಸಿನಿಮಾ ವಿಕೆ29 ಗೆ ಮುಹೂರ್ತ ನೆರವೇರಿದೆ. ಸಮಾರಂಭದಲ್ಲಿ ಕಾಟೇರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತು ಚಿತ್ರ ನಿರ್ಮಾಪಕ ಗುರು ದೇಶಪಾಂಡೆ ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ರಚಿತಾರಾಮ್ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ (ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. "ಡೇರ್ ಡೆವಿಲ್ ಮುಸ್ತಫಾ" ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಕೋಲಾರ ಮೂಲದವರೇ ಆದ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. 90ರ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಇದು. ಶಿವರಾಮ ಕಾರಂತರ ಚೋಮನ ದುಡಿ ಚಿತ್ರದಲ್ಲಿನ ಚೋಮನ ಪಾತ್ರ ನಮ್ಮ ಈ ಸಿನಿಮಾಕ್ಕೆ ಪ್ರೇರಣೆ. ಕೋಲಾರ, ಗುಡಿಬಂಡೆ ಮತ್ತಿತರ ಕಡೆ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.

Read More
Next Story