ಸದ್ದಿಲ್ಲದೆ ಡೆವಿಲ್ ಚಿತ್ರದ ಬಿಗ್ ಅಪ್‌ಡೇಟ್ ನೀಡಿದ ದರ್ಶನ್
x
ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

ಸದ್ದಿಲ್ಲದೆ 'ಡೆವಿಲ್' ಚಿತ್ರದ ಬಿಗ್ ಅಪ್‌ಡೇಟ್ ನೀಡಿದ ದರ್ಶನ್

ನಟ ದರ್ಶನ್‌ ಅವರ 47ನೇ ಬರ್ತ್‌ಡೇ ಪ್ರಯುಕ್ತ ಫೆ.16ರಂದು ಡೆವಿಲ್‌ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಟ ದರ್ಶನ್‌ ಘೋಷಣೆ ಮಾಡಿದ್ದಾರೆ.


Click the Play button to hear this message in audio format

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ʼಡೆವಿಲ್‌ʼ ಸಿನಿಮಾದ ಅಪ್‌ಡೇಟ್‌ಗಳಿಗಾಗಿ ದರ್ಶನ್‌ ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ನಟ ದರ್ಶನ್‌ ಅವರ 47ನೇ ಬರ್ತ್‌ಡೇ ಪ್ರಯುಕ್ತ ಫೆ.16ರಂದು ಡೆವಿಲ್‌ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಟ ದರ್ಶನ್‌ ಘೋಷಣೆ ಮಾಡಿದ್ದಾರೆ. "ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ- 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ" ಎಂದು ಸ್ವತ: ನಟ ದರ್ಶನ್‌ ಅವರೇ ಹೊಸ ಚಿತ್ರದ ಬಿಡುಗಡೆಯ ಪೋಸ್ಟರ್‌ ಶೇರ್‌ ಮಾಡಿದ್ದಾರೆ.

ಶ್ರೀ ಜೈಮಾತಾ ಕಂಬೈನ್ಸ್‌ ಮತ್ತು ವೈಷ್ಣೋ ಸ್ಟುಡಿಯೋ ಬ್ಯಾನರ್‌ನಲ್ಲಿ ಜೆ ಜಯಮ್ಮ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಪ್ರಕಾಶ್‌ ವೀರ್‌ (ಮಿಲನ ಪ್ರಕಾಶ್)‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 2017ರಲ್ಲಿ ತಾರಕ್‌ ಸಿನಿಮಾ ತೆರೆಗೆ ಬಂದಿತ್ತು. ಆ ಫ್ಯಾಮಿಲಿ ಡ್ರಾಮಾ ಶೈಲಿಯ ಸಿನಿಮಾವನ್ನು ಇದೇ ಪ್ರಕಾಶ್‌ ವೀರ್‌ ನಿರ್ದೇಶನ ಮಾಡಿದ್ದರು. ಇದೀಗ ಸುದೀರ್ಘ ಏಳು ವರ್ಷಗಳ ಬಳಿಕ ಈ ನಟ ಮತ್ತು ನಿರ್ದೇಶಕ ಜೋಡಿ, ಡೆವಿಲ್‌ ಸಿನಿಮಾ ಮೂಲಕ ಮತ್ತೆ ಒಂದಾಗಿದೆ.

ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಸುಧಾಕರ್‌ ಎಸ್‌ ರಾಜ್‌ ಅವರ ಛಾಯಾಗ್ರಹಣ, ಮೋಹನ್‌ ಬಿ ಕೆರೆ ಅವರ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ. ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಆಯ್ಕೆಯಾಗಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ನಟನೆಯ ಎರಡು ಸಿನಿಮಾಗಳು- ಕ್ರಾಂತಿ ಮತ್ತು ಕಾಟೇರ- ಕಳೆದ ವರ್ಷ ಬಿಡುಗಡೆಯಾಗಿದ್ದವು. ಕ್ರಾಂತಿ ಬಾಕ್ಸಾಫೀಸಿನಲ್ಲಿ ಸದ್ದು ಮಾಡದೇ ಬದಿಗೆ ಸರಿದಿತ್ತು. ಆದರೆ, ಕಾಟೇರ ಮಾತ್ರ ದೊಡ್ಡ ದಾಖಲೆಯನ್ನೇ ಬರೆದಿತ್ತು. ಕನ್ನಡದಲ್ಲಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ಬಾಚಿಕೊಂಡಿತ್ತು.

Read More
Next Story