Bigg Boss Tamil 8 | ಈ ಬಾರಿ ಕಮಲ್‌ ಹಾಸನ್‌ ಹೋಸ್ಟ್‌ ಮಾಡುತ್ತಿಲ್ಲ; ಕಾರಣ?
x
ಕಮಲ್‌ ಹಾಸನ್‌

Bigg Boss Tamil 8 | ಈ ಬಾರಿ ಕಮಲ್‌ ಹಾಸನ್‌ ಹೋಸ್ಟ್‌ ಮಾಡುತ್ತಿಲ್ಲ; ಕಾರಣ?

ತಮಿಳು ಬಿಗ್‌ ಬಾಸ್‌ ರಿಯಾಲಿಟಿ ಶೋ ಶೀಘ್ರದಲ್ಲಿ ಪ್ರಸಾರವಾಗಲಿದೆ. ಆದರೆ ಇದುವರೆಗೆ ಈ ರಿಯಾಲಿಟಿ ಶೋವನ್ನು ಹೋಸ್ಟ್‌ ಮಾಡುತ್ತಿದ್ದ ನಟ ಕಮಲ್‌ ಹಾಸನ್‌ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಮಾಡುತ್ತಿಲ್ಲ.


Click the Play button to hear this message in audio format

ತಮಿಳು ಬಿಗ್‌ ಬಾಸ್‌ ರಿಯಾಲಿಟಿ ಶೋ ಶೀಘ್ರದಲ್ಲಿ ಪ್ರಸಾರವಾಗಲಿದೆ. ಆದರೆ ಇದುವರೆಗೆ ಈ ರಿಯಾಲಿಟಿ ಶೋವನ್ನು ಹೋಸ್ಟ್‌ ಮಾಡುತ್ತಿದ್ದ ನಟ ಕಮಲ್‌ ಹಾಸನ್‌ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಮಾಡುತ್ತಿಲ್ಲ.

"ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮದ ಹೊಣೆ ಹೊರಲು ಸಾಧ್ಯ ಇಲ್ಲ. ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರ ನೀಡಿದ ವಿಜಯ್ ಟಿವಿಗೆ ಧನ್ಯವಾದ" ಎಂದಿರುವ ಕಮಲ್ ಹಾಸನ್, ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ನಿರೂಪಣೆ ಮಾಡುತ್ತಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿರುವ ನಟ ಕಮಲ್‌ ಹಾಸನ್‌, “ಆತ್ಮೀಯ ವೀಕ್ಷಕರೇ, ಭಾರವಾದ ಹೃದಯದಿಂದ, 7 ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಪ್ರಯಾಣದಿಂದ ನಾನು ಸಣ್ಣ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಸಿನಿಮಾಗಳ ಕಮಿಟ್‌ಮೆಂಟ್‌ನಿಂದಾಗಿ ಬಿಗ್ ಬಾಸ್ ತಮಿಳಿನ ಮುಂಬರುವ ಸೀಸನ್‌ಗೆ ಹೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.

"ನಿಮ್ಮ ಮನೆ-ಮನೆಗೂ ತಲುಪುವ ಸೌಭಾಗ್ಯ ನನಗೆ ಸಿಕ್ಕಿತ್ತು. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ನನಗೆ ಧಾರೆ ಎರೆದಿದ್ದೀರಿ, ಅದಕ್ಕಾಗಿ ನಿಮಗೆ ನನ್ನ ಕೃತಜ್ಞತೆಗಳು. ಇಲ್ಲಿ ನಾನು ನನ್ನ ಕಲಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ. ಈ ಕಲಿಕೆಯ ಅನುಭವಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮತ್ತು ಸ್ಪರ್ಧಿಗಳಿಗೂ ನನ್ನ ಧನ್ಯವಾದಗಳು. ಕೊನೆಯದಾಗಿ, ವಿಜಯ್ ಟಿವಿಯಲ್ಲಿನ ಅದ್ಭುತ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಜೊತೆಗೆ ಈ ಉದ್ಯಮವನ್ನು ಒಂದು ದೊಡ್ಡ ಯಶಸ್ಸನ್ನು ಮಾಡುವಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.

ಕಮಲ್ ಹಾಸನ್ ಅವರು 2007 ರಲ್ಲಿ ‘ಬಿಗ್ ಬಾಸ್ ತಮಿಳು’ ನಿರೂಪಣೆ ಆರಂಭಿಸಿ ಬಳಿಕ ಪ್ರತಿ ಸೀಸನ್ ಅನ್ನು ನಿರಂತರವಾಗಿ ಹೋಸ್ಟ್ ಮಾಡಿದ್ದಾರೆ. ಇದೀಗ ಈ ನಿರೂಪಣೆಯಿಂದ ಕಮಲ್‌ಹಾಸನ್‌ ಹೊರನಡೆದಿದ್ದು, ‘ಬಿಗ್ ಬಾಸ್ ತಮಿಳು 8’ ಹೊಸ ಹೋಸ್ಟ್ ಯಾರೆಂದು ಇನ್ನೂ ಘೋಷಿಸಲಾಗಿಲ್ಲ.

ಹಿಂದಿ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ʼಬಿಗ್‌ ಬಾಸ್‌ʼ ಸರಣಿಗಳಲ್ಲಿ ಈ ಬಾರಿ ಹೋಸ್ಟ್‌ ಬದಲಾವಣೆಯ ಪರ್ವ ಆರಂಭವಾಗಿದ್ದು, ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ಬದಲಾಗಿ ಅನಿಲ್‌ ಕಪೂರ್‌ ಈಗಾಗಲೇ ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ಕೂಡ ಈವರೆಗೆ ಶೋ ಹೋಸ್ಟ್‌ ಮಾಡುತ್ತಿದ್ದ ಕಿಚ್ಚ ಸುದೀಪ್‌ ಅವರ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಲಾಗುವುದು ಎಂಬ ವರದಿಗಳಿವೆ.

Read More
Next Story