ಆಮೀರ್ ಬಳಿಕ ರಣ್ವೀರ್ ಸಿಂಗ್ ಡೀಪ್‌ಪೇಕ್ ವಿಡಿಯೋ ವೈರಲ್…
ರಣ್ವೀರ್ ಸಿಂಗ್ ಅವರ ಈ ಡೀಪ್‌ಪೇಕ್ ವಿಡಿಯೋವನ್ನು ಅನೇಕ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದಷ್ಟೇ ನಟ ಆಮೀರ್ ಖಾನ್ ಕಾಂಗ್ರೆಸ್‌ಗೆ ವೋಟ್ ಮಾಡಿ ಎಂದು ಹೇಳುತ್ತಿರುವಂತಹ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಬಹಳಷ್ಟು ವೈರಲ್ ಆದ ನಂತರ ಇದು ಡೀಪ್‌ಫೇಕ್ ವಿಡಿಯೋ ಆಗಿದ್ದು, ನಟ ಆಮೀರ್ ಖಾನ್ ಯಾವುದೇ ಪಕ್ಷವನ್ನು ಬೆಂಬಲಿಸಿ ಪ್ರಚಾರ ಮಾಡಿಲ್ಲ ಎಂದು ತಿಳಿದು ಬಂದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಬಾಲಿವುಡ್ ನಟ ರಣ್ವೀರ್ ಸಿಂಗ್ ಕಾಂಗ್ರೆಸ್ ಪರ ಪ್ರಚಾರ ಮಾಡಿ ಕಾಂಗ್ರೆಸ್‌ಗೆ ವೋಟು ಹಾಕಿ ಎಂದು ಹೇಳುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ನಟ ಸುದ್ದಿಸಂಸ್ಥೆ ಎಎನ್‌ಐಗೆ ಬೈಟ್ ನೀಡುತ್ತಿರುವಂತೆ ಚಿತ್ರಿಸಲಾಗಿದ್ದು, ಮಾತಿನ ಕೊನೆಯಲ್ಲಿ ಅವರು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದಂತೆ ತೋರಿಸಲಾಗಿದೆ. ರಣ್ವೀರ್ ಸಿಂಗ್ ಅವರ ಈ ಡೀಪ್‌ಪೇಕ್ ವಿಡಿಯೋವನ್ನು ಅನೇಕ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ನಮ್ಮ ದು:ಖವನ್ನು ಸಂಭ್ರಮಿಸುತ್ತಿದ್ದಾರೆ, ನಮ್ಮ ಶ್ರಮವನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ವಿಕಾಸ ನಮ್ಮ ನ್ಯಾಯವನ್ನು ನಾವು ಯಾರಿದಂಲೂ ಕೇಳುವಂತಾಗಬಾರದು. ಹೀಗಾಗಿ ಯೋಚಿಸಿ ಮತದಾನ ಮಾಡಿ ಎಂದು ರಣ್ವೀರ್ ಸಿಂಗ್ ಹೇಳುತ್ತಿರುವಂತೆ ಈ ವಿಡಿಯೋ ಇದ್ದರೆ, ವಿಡಿಯೋದ ಕೊನೆಯಲ್ಲಿ ನ್ಯಾಯದ ಪರ ಮತ ಹಾಕಿ ಕಾಂಗ್ರೆಸ್ ಪರ ಮತ ಹಾಕಿ ಎಂಬ ಧ್ವನಿಯೊಂದು ಕೇಳಿ ಬರುತ್ತಿದೆ. ಈ ವಿಡಿಯೋ ಫೇಕ್ ಎಂಬುದು ತಿಳಿಯದೇ ಅನೇಕರು ಶೇರ್ ಮಾಡಿಕೊಳ್ಳುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ಈಗಾಗಲೇ ವೀಕ್ಷಿಸಿದ್ದಾರೆ.
ಇತ್ತಿಚೆಗೆ ಅಯೋಧ್ಯೆಗೆ ಭೇಟಿ ನೀಡಿದ ರಣ್ವೀರ್ ಸಿಂಗ್ ಸುದ್ದಿಸಂಸ್ಥೆ ಎನ್‌ಐಗೆ ಬೈಟ್ ನೀಡ್ತಾ, 'ಇವತ್ತು ನಾನು ಅನುಭವಿಸಿದ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ನಾನು ಜೀವನಪರ್ಯಂತ ಶಿವನ ಭಕ್ತನಾಗಿಯೇ ಉಳಿಯುವೆ. ನಾನು ಇಲ್ಲಿಗೆ ಇದೇ ಮೊದಲ ಬಾರಿಗೆ ಬಂದಿದ್ದೇನೆ ಎಂದು ರಣ್ವೀರ್ ಹೇಳಿಕೊಂಡಿದ್ದರು. ಈ ವಿಡಿಯೋದ ಆಡಿಯೋ ತೆಗೆದ ಡೀಪ್‌ಫೇಕ್ ಕಿಡಿಗೇಡಿಗಳು ಅದಕ್ಕೆ ಮೋದಿಯನ್ನು ರಣ್ವೀರ್ ಸಿಂಗ್ ದೂರುವಂತಹ ರೀತಿ ರಣ್ವೀರ್ ದನಿಯಂತಿರುವ ವಾಯ್ಸ್ ನೀಡಿ ವಿಡಿಯೋ ಸೃಷ್ಟಿಸಿದ್ದಾರೆ.