ಕಿಶೋರ್ ಭಾರ್ಗವ್ ನಿರ್ದೇಶನದ ತೆಲುಗು-ಕನ್ನಡ ದ್ವಿಭಾಷಾ ಸಿನಿಮಾದಲ್ಲಿ ನಟ ರಿಷಿ
x
ನಟ ರಿಷಿ

ಕಿಶೋರ್ ಭಾರ್ಗವ್ ನಿರ್ದೇಶನದ ತೆಲುಗು-ಕನ್ನಡ ದ್ವಿಭಾಷಾ ಸಿನಿಮಾದಲ್ಲಿ ನಟ ರಿಷಿ

ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ ಸಂಜು ವೆಡ್ಸ್ ಗೀತಾ, ಹಾಗೆ ಸುಮ್ಮನೆ ಚಿತ್ರಗಳ ನಿರ್ಮಾಪಕರಾದ ಪ್ರಮೋದ್ ನಾರಾಯಣ್ ಅವರ ನಿರ್ಮಾಣದಲ್ಲಿ ನೂತನ ಚಿತ್ರವೊಂದು ಆರಂಭವಾಗಲಿದೆ.


Click the Play button to hear this message in audio format

ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ ಸಂಜು ವೆಡ್ಸ್ ಗೀತಾ, ಹಾಗೆ ಸುಮ್ಮನೆ ಚಿತ್ರಗಳ ನಿರ್ಮಾಪಕರಾದ ಪ್ರಮೋದ್ ನಾರಾಯಣ್ ಅವರ ನಿರ್ಮಾಣದಲ್ಲಿ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ.

ಕವಲುದಾರಿ, ಆಪರೇಷನ್ ಅಲುಮೇಲಮ್ಮ ಚಿತ್ರಗಳ ಮೂಲಕ ಜನಪ್ರಿಯರಾಗಿ ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ರಿಷಿ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಕಿಶೋರ್ ಭಾರ್ಗವ್ ನಿರ್ದೇಶಿಸಲಿದ್ದಾರೆ. ಕರ್ನಾಟಕದವರಾದ ಕಿಶೋರ್ ಅವರು ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಿದ್ದಾರೆ, ತೆಲುಗು ಚಿತ್ರವನ್ನು ನಿರ್ದೇಶಿಸಿದ್ದಾರೆ, ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಮಳೆಗಾಲದ ನಂತರ ಆಗಸ್ಟ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಮತ್ತು ಶೀಘ್ರದಲ್ಲೇ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗುವುದು ಎಂದು ನಿರ್ಮಾಪಕ ಪ್ರಮೋದ್ ನಾರಾಯಣ್ ಘೋಷಿಸಿದ್ದಾರೆ.

ನಿರ್ಮಾಪಕರು ಕನ್ನಡ-ತೆಲುಗು ದ್ವಿಭಾಷಾ ಚಿತ್ರಕ್ಕಾಗಿ ಪ್ಲಾನ್ ಮಾಡುತ್ತಿದ್ದಾರೆ. ರಿಷಿ ಡಿಸ್ನಿ ಹಾಟ್‌ಸ್ಟಾರ್‌ನ ವೆಬ್ ಸರಣಿ 'ಸೈತಾನ್' ಮೂಲಕ ತೆಲುಗಿನಲ್ಲೂ ಗುರುತಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿಯೂ ಜನಪ್ರಿಯರಾಗಿದ್ದಾರೆ. ಎಲ್ಲ ಭಾಷೆಗಳ ಅಭಿಮಾನಿಗಳಿಗೂ ಇಷ್ಟವಾಗುವ ಕಥೆ ನಮ್ಮ ಸಿನಿಮಾದಲ್ಲಿ ಇರಲಿದೆ’ ಎನ್ನುತ್ತಾರೆ ನಿರ್ಮಾಪಕ ಪ್ರಮೋದ್ ನಾರಾಯಣ್. ರಿಷಿ ಅವರ ಮುಂದಿನ ಬಿಡುಗಡೆ 'ರುದ್ರ ಗರುಡ ಪುರಾಣ' ಆಗಿದ್ದು,ಈ ಸಿನಿಮಾದಲ್ಲಿ ರಿಷಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆ.

Read More
Next Story