Loksabha Election Results 2024| ಬಿಜೆಪಿ+ ಜೆಡಿಎಸ್ -19 , ಕಾಂಗ್ರೆಸ್- 9
ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ʻದ ಫೆಡರಲ್ ಕರ್ನಾಟಕʼ ವೆಬ್ ಪೋರ್ಟಲ್‌ನಲ್ಲಿ ಲಭ್ಯ.
ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ.
ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ತಯಾರಿ ಮಾಡಿಕೊಂಡಿದ್ದು, ಆಯಾ ಲೋಕಸಭಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಇಟ್ಟಿರುವ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರ ನೇತೃತ್ವದಲ್ಲಿ ಮತ ಎಣಿಕೆ ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವ್ಯಾಪಕ ಬಂದೋಬಸ್ತಿನ ಏರ್ಪಾಡು ಕೂಡ ಆಗಿದೆ.
Live Updates
- 4 Jun 2024 11:54 AM IST
ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಬಿಜೆಪಿ: ಅಣ್ಣಾಸಾಹೇಬ ಜೊಲ್ಲೆ(2,71,472)
ಕಾಂಗ್ರೆಸ್: ಪ್ರಿಯಾಂಕಾ ಜಾರಕಿಹೊಳಿ(3,27,707)
ಕಾಂಗ್ರೆಸ್ ಅಭ್ಯರ್ಥಿಗೆ 56,235 ಮತಗಳ ಮುನ್ನಡೆ
- 4 Jun 2024 11:53 AM IST
ಮಂಡ್ಯ ಲೋಕಸಭಾ ಕ್ಷೇತ್ರ
ಮಂಡ್ಯ ಲೋಕಸಭಾ ಚುನಾವಣೆ 7ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 1,27,632 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕುಮಾರಸ್ವಾಮಿ 3,24,033 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 1,96,401 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ
- 4 Jun 2024 11:52 AM IST
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 48459 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚೌಟ 2,20,294 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 1,71,835 ಮತ ಪಡೆದಿದ್ದಾರೆ. ನೋಟಾಕ್ಕೆ 6,945 ಮತ ಚಲಾವಣೆ ಆಗಿದೆ.
- 4 Jun 2024 11:52 AM IST
ದಾವಣಗೆರೆ ಲೋಕಸಭಾ ಕ್ಷೇತ್ರ
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 3,980 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಡಾ.ಪ್ರಭಾ ಮಲ್ಲಿಕಾರ್ಜುನ್ 1,48,446 ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ 1,44,466 ಮತಗಳನ್ನು ಪಡೆದಿದ್ದಾರೆ.
- 4 Jun 2024 11:50 AM IST
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ
ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಒಟ್ಟು 3 ಲಕ್ಷ ಮತಗಳನ್ನು ಗಳಿಸಿದ್ದಾರೆ. ಅವರು 3,04,365ಮತಗಳನ್ನು ಪಡೆದು 62,966 ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 2,41,399 ಮತಗಳನ್ನು ಪಡೆದಿದ್ದಾರೆ. ಯದುವೀರ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
- 4 Jun 2024 11:49 AM IST
ವಿಜಯಪುರ ಲೋಕಸಭಾ ಕ್ಷೇತ್ರ
ಬಿಜೆಪಿ (ರಮೇಶ ಜಿಗಜಿಣಗಿ): 1,23,466
ಕಾಂಗ್ರೆಸ್ (ರಾಜು ಆಲಗೂರ): 1,09,383
ಬಿಜೆಪಿ ಮುನ್ನಡೆ: 14,083
- 4 Jun 2024 11:49 AM IST
ಬೆಳಗಾವಿ ಲೋಕಸಭಾ ಕ್ಷೇತ್ರ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 6,00,838 ಮತಗಳ ಎಣಿಕೆ ಆಗಿದ್ದು, ಬಿಜೆಪಿಯ ಜಗದೀಶ ಶೆಟ್ಟರ್ 84,168 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 3,34,178 ಮತಗಳನ್ನು ಶೆಟ್ಟರ್ ಬಾಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳಕರ 2,50,010 ಮತ ಗಳಿಸಿದ್ದಾರೆ.
- 4 Jun 2024 11:49 AM IST
ಶಿವಮೊಗ್ಗ ಲೋಕಸಭಾ ಚುನಾವಣೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 83,೨೩೨ ಮತಗಳ ಭಾರೀ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಬಿ.ವೈ.ರಾಘವೇಂದ್ರ 2,79,588 ಮತಗಳು ಹಾಗೂ ಗೀತಾ ಶಿವರಾಜಕುಮಾರ್ 1,96,336 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 11,112 ಮತಗಳ ಪಡೆದಿದ್ದಾರೆ.
- 4 Jun 2024 11:48 AM IST
ಕೋಲಾರ ಲೋಕಸಭಾ ಕ್ಷೇತ್ರ
ಎಂ.ಮಲ್ಲೇಶ್ ಬಾಬು (ಜೆಡಿಎಸ್); 4,10,458
ಕೆ.ವಿ.ಗೌತಮ್ (ಕಾಂಗ್ರೆಸ್); 3,82,234
ಮುನ್ನಡೆ: 28,224 (ಜೆಡಿಎಸ್)
- 4 Jun 2024 11:47 AM IST
ತುಮಕೂರು ಲೋಕಸಭಾ ಕ್ಷೇತ್ರ
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 66,123 ಮತಗಳ ಮುನ್ನಡೆ ಪಡೆದಿದ್ದಾರೆ. ಮತ ಎಣಿಕೆ ಪ್ರಾರಂಭದಿಂದಲೂ ಸೋಮಣ್ಣ ಮುನ್ನಡೆ ಸಾಧಿಸಿದ್ದಾರೆ. ಸೋಮಣ್ಣ 2,55,656 ಮತ ಪಡೆದಿದ್ದು, ಮುದ್ದಹನುಮೇಗೌಡ 1,89,533 ಮತ ಪಡೆದಿದ್ದಾರೆ.