ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ
x

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ


ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏ.10) ಪ್ರಕಟವಾಗಿದೆ. ಬೆಳಿಗ್ಗೆ 11 ಗಂಟೆಗೆ ವೆಬ್​​ಸೈಟ್​ನಲ್ಲಿ ವಿಜ್ಞಾನ, ವಾಣಿಜ್ಯ, ಕಲೆ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳ ಫಲಿತಾಂಶವನ್ನು ಏಕಕಾಲದಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾ.1ರಿಂದ ಮಾರ್ಚ್ 22ರವರೆಗೆ, 1124 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದೆ.

ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ದುರಾದೃಷ್ಟವೆಂದರೆ 35 ಕಾಲೇಜುಗಳಿಗೆ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ. ಒಟ್ಟು 463 ಕಾಲೇಜುಗಳಲ್ಲಿ ಶೇ. 100% ಫಲಿತಾಂಶ ಬಂದಿದ್ದು, ಅದರಲ್ಲಿ 91 ಸರ್ಕಾರಿ ಕಾಲೇಜುಗಳಲ್ಲಿ ಶೇ.100% ಫಲಿತಾಂಶ ಬಂದಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ. ಗದಗ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ.

ಜಿಲ್ಲೆಗಳ ಶೇಕಡಾವಾರು ಫಲಿತಾಂಶ:

1. ದಕ್ಷಿಣ ಕನ್ನಡ- ಶೇ. 97.37

2. ಉಡುಪಿ- ಶೇ. 96.80

3. ವಿಜಯಪುರ- ಶೇ. 94.89

4. ಉತ್ತರ ಕನ್ನಡ- ಶೇ. 92.51

5. ಕೊಡಗು- ಶೇ. 92.13

6. ಬೆಂಗಳೂರು ದಕ್ಷಿಣ- ಶೇ. 89.57

7. ಬೆಂಗಳೂರು ಉತ್ತರ- ಶೇ.88.67

8. ಶಿವಮೊಗ್ಗ ಶೇ. 88.58

9. ಚಿಕ್ಕಮಗಳೂರು ಶೇ. 88.20

10. ಬೆಂಗಳೂರು ಗ್ರಾಮಾಂತರ ಶೇ. 87.55

11. ಬಾಗಲಕೋಟೆ ಶೇ. 87.54

12. ಕೋಲಾರ ಶೇ. 86.12

13. ಹಾಸನ ಶೇ. 85.83

14. ಚಾಮರಾಜನಗರ ಶೇ. 84.99

15. ಚಿಕ್ಕೋಡಿ ಶೇ. 84.10

16. ರಾಮನಗರ ಶೇ. 83.58

17. ಮೈಸೂರು ಶೇ. 83.13

18. ಚಿಕ್ಕಬಳ್ಳಾಪುರ ಶೇ. 82.84

19. ಬೀದರ್ ಶೇ. 81.69

20. ತುಮಕೂರು ಶೇ. 81.03

21. ದಾವಣಗೆರೆ ಶೇ. 80.96

22. ಕೊಪ್ಪಳ ಶೇ. 80.83

23. ಧಾರವಾಡ 80.70

24. ಮಂಡ್ಯ ಶೇ. 80.56

25. ಹಾವೇರಿ ಶೇ. 78.3626.

26 ಯಾದಗಿರಿ ಶೇ. 77.29

27. ಬೆಳಗಾವಿ ಶೇ. 77.20

28. ಕಲಬುರಗಿ ಶೇ. 75.48

29. ಬಳ್ಳಾರಿ ಶೇ. 74.70

30. ರಾಯಚೂರು ಶೇ. 73.11

31. ಚಿತ್ರದುರ್ಗ ಶೇ. 72.92

32. ಗದಗ ಶೇ. 72.86

ಕಲಾ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು

ಬೆಂಗಳೂರಿನ ಮೇಧಾ ಡಿ

ವಿಜಯಪುರದ ವೇದಾಂತ್

ಬಳ್ಳಾರಿಯ ಕವಿತಾ

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌

ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು (597) ಪ್ರಥಮ

ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ 596 ದ್ವಿತೀಯ ಸ್ಥಾನ

ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ 596 ದ್ವಿತೀಯ ಸ್ಥಾನ

ತುಳಸಿ ಪೈ ಕೆನರಾ ಕಾಲೇಜು ಮಂಗಳೂರು 596 ದ್ವಿತೀಯ ಸ್ಥಾನ

ತೇಜಸ್ವಿನಿ ಕೆ. ಕಾಲೆ , MES ಮಲ್ಲೇಶ್ವರ 596 ದ್ವಿತೀಯ ಸ್ಥಾನ

ವಿಜ್ಞಾನ ವಿಭಾಗ

ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

35 ಕಾಲೇಜುಗಳು ಶೂನ್ಯ ಫಲಿತಾಂಶ

ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ:

ಸರ್ಕಾರಿ ಕಾಲೇಜು- 02

ಅನುದಾನಿತ ಕಾಲೇಜು - 06

ಅನುದಾನ‌‌‌ ರಹಿತ ಕಾಲೇಜು - 26

ವಿಭಜಿತ ಪದವಿ ಪೂರ್ವ ಕಾಲೇಜು - 01

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು - 6,98,378

ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690

ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ - 1,53,370

ಶೇ.60% - 2,89733

ದ್ವಿತೀಯ ದರ್ಜೆ- 72,098

ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು - 37,489

ಕಳೆದ ವರ್ಷದ, ಅಂದರೆ 2023 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದರು. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರ ಪೈಕಿ ಶೇಕಡಾ 80.25 ರಷ್ಟು ಉತ್ತೀರ್ಣರಾಗಿದ್ದರೆ, ವಿದ್ಯಾರ್ಥಿಗಳ ಪೈಕಿ ಶೇಕಡಾ 69.05 ರಷ್ಟು ಮಂದಿ ಉತ್ತೀರ್ಣರಾಗಿದ್ದರು. ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇಕಡಾ 74.67 ರಷ್ಟಿತ್ತು. ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಫಲಿತಾಂಶ ಪರಿಶೀಲಿಸುವುದು ಹೇಗೆ?

karresults.nic.in ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

ಮುಖಪುಟದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಅಂದರೆ ವಿಜ್ಞಾನ, ವಾಣಿಜ್ಯ ಮತ್ತು ಕಲೆ ಆಯ್ಕೆ ಮಾಡಿಕೊಳ್ಳಿ.

ಕ್ಲಿಕ್ ಮಾಡಿದಾಗ ನಿಮಗೆ ಫಲಿತಾಂಶವು ಸ್ಕ್ರೀನ್​​ ಮೇಲೆ ಕಾಣಿಸುತ್ತದೆ.

ಬಳಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Read More
Next Story