ವಯನಾಡು- ರಾಹುಲ್ ಗಾಂಧಿ ವಿರುದ್ಧ ಅನ್ನಿ ರಾಜಾ ಸ್ಪರ್ಧೆ
x

ವಯನಾಡು- ರಾಹುಲ್ ಗಾಂಧಿ ವಿರುದ್ಧ ಅನ್ನಿ ರಾಜಾ ಸ್ಪರ್ಧೆ


ತಿರುವನಂತಪುರಂ, ಫೆ.26- ಕೇರಳದ ಆಡಳಿತಾರೂಢ ಎಡ ರಂಗದ ಎರಡನೇ ದೊಡ್ಡ ಪಾಲುದಾರ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ವು ಲೋಕಸಭೆ ಚುನಾವಣೆಯ ನಾಲ್ಕು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಹಿರಿಯ ನಾಯಕಿ ಅನ್ನಿ ರಾಜಾ ನಾಮನಿರ್ದೇಶನಗೊಂಡಿದ್ದಾರೆ. ಇದು ಪ್ರಸ್ತುತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕ್ಷೇತ್ರ.

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿನಿಧಿಸುವ ಮತ್ತೊಂದು ಪ್ರಮುಖ ಕ್ಷೇತ್ರವಾದ ತಿರುವನಂತಪುರದಿಂದ ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಸಂಸದ ಪನ್ನಿಯನ್ ರವೀಂದ್ರನ್ ಸ್ಪರ್ಧಿಸಲಿದ್ದಾರೆ. ಮಾಜಿ ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ತ್ರಿಶೂರ್‌ ಮತ್ತು ಪಕ್ಷದ ಯುವ ಘಟಕ ಎಐವೈಎಫ್ ನಾಯಕ ಸಿ.ಎ. ಅರುಣ್‌ಕುಮಾರ್ ಅವರು ಮಾವೇಲಿಕ್ಕರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

Read More
Next Story