ಲಂಟಾನಾ ಕರಕುಶಲಕರ್ಮಿಗಳ ಪ್ರೋತ್ಸಾಹಕ್ಕೆ ಒಂದು ಕೋಟಿ ರೂ. ನೆರವಿನ ಭರವಸೆ
x
ಲಂಟಾನಾ ಕರಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸಲು ಒಂದು ಕೋಟಿ ರೂ. ನೀಡುವುದಾಗಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದರು.

ಲಂಟಾನಾ ಕರಕುಶಲಕರ್ಮಿಗಳ ಪ್ರೋತ್ಸಾಹಕ್ಕೆ ಒಂದು ಕೋಟಿ ರೂ. ನೆರವಿನ ಭರವಸೆ

ಲಂಟಾನಾ ಕಡ್ಡಿಯಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವ ಆದಿವಾಸಿಗಳಿಗೆ ಪೋತ್ಸಾಹ ನೀಡಲು ಒಂದು ಕೋಟಿ ರೂ. ನೆರವು ನೀಡಲು ಪ್ರಯತ್ನಿಸುವುದಾಗಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದ್ದಾರೆ.


Click the Play button to hear this message in audio format

ಬೆಂಗಳೂರು: ಲಂಟಾನಾ ಗಿಡದಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವ ಆದಿವಾಸಿ ಸಮುದಾಯದವರಿಗೆ ತರಬೇತಿ ಮತ್ತು ಪೋತ್ಸಾಹ ನೀಡಲು ಒಂದು ಕೋಟಿ ರೂ. ನೆರವು ನೀಡುವ ಬಗ್ಗೆ ಪರಿಶೀಲಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಲಾಲ್ ಬಾಗ್‌ ನಲ್ಲಿ ಗುರುವಾರ ಲಂಟಾನಾ ಕಡ್ಡಿಗಳಿಂದ ತಯಾರಿಸಿದ ಕಾಡೆಮ್ಮೆ ಮತ್ತು ಆನೆಯ ಆಕೃತಿಗಳನ್ನು ಅನಾವರಣ ಮಾಡಿದರು.

ಲಂಟಾನ ವಿದೇಶದಿಂದ ಬಂದಿರುವ ಕಳೆಯಾಗಿದ್ದು, ಗಿಡಗಳು ಮುಳ್ಳಿನಿಂದ ಕೂಡಿರುತ್ತದೆ. ರಾಜ್ಯದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ ಮೊದಲಾದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ವ್ಯಾಪಿಸಿದ್ದು, ಇದರಿಂದ ಆನೆ, ಜಿಂಕೆ ಇತ್ಯಾದಿ ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ಸಿಗದಂತಾಗಿದೆ. ಈ ಕಳೆಯ ನಿವಾರಣೆ ಅನಿವಾರ್ಯವಾಗಿದ್ದು, ಆದಿವಾಸಿಗಳ ನೆರವಿನಿಂದ ಈ ಕಳೆ ತೆಗೆಸಿ, ಅಲಂಕಾರಿಕ ವಸ್ತು ತಯಾರಿಸಿದರೆ ಅದರಿಂದ ಜೀವನೋಪಾಯವೂ ಆಗುತ್ತದೆ; ಕಳೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

Read More
Next Story