Virat kohli: ಆರ್​ಸಿಬಿಯ ಬ್ಯಾಟಿಂಗ್ ವಿಭಾಗಕ್ಕೆ ವಿರಾಟ್ ಕೊಹ್ಲಿಯ ಪ್ರಶಂಸೆ
x

Virat kohli: ಆರ್​ಸಿಬಿಯ ಬ್ಯಾಟಿಂಗ್ ವಿಭಾಗಕ್ಕೆ ವಿರಾಟ್ ಕೊಹ್ಲಿಯ ಪ್ರಶಂಸೆ

ರಾಜಸ್ಥಾನ್ ರಾಯಲ್ಸ್ 110 ರನ್​ಗಳಿಗೆ 2 ವಿಕೆಟ್ ನಷ್ಟ ಮಾಡಿಕೊಂಡಉ ಉತ್ತಮ ಸ್ಥಿತಿಯಲ್ಲಿದ್ದರೂ, ನಂತರ ನಿಧಾನವಾಗಿ ಕುಸಿತ ಕಂಡಿತು. ವೇಗಿಬೌಲರ್ ಜೋಶ್ ಹ್ಯಾಜಲ್‌ವುಡ್‌ 33 ರನ್​ಗಳಿಗೆ 4 ವಿಕೆಟ್ ಉರುಳಿಸಿ ರಾಜಸ್ಥಾನ್‌ ತಂಡವನ್ನು 9 ವಿಕೆಟ್​ಗೆ 194 ರನ್​ಗಳಿಗೆ ಕಟ್ಟಿ ಹಾಕಿತು.


ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ತಂಡದ ಬ್ಯಾಟಿಂಗ್ ವಿಭಾಗವನ್ನು ಕೊಂಡಾಡಿದ್ದಾರೆ. ಗುರುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ 11 ರನ್‌ಗಳ ರೋಚಕ ಗೆಲುವಿನ ನಂತರ ಅವರು ಹೇಳಿಕೆ ನೀಡಿದ್ದಾರೆ. ಒತ್ತಾಯದ ಶಾಟ್‌ಗಳನ್ನು ಆಡುವ ಬದಲು ಚೆಂಡನ್ನು ಸರಿಯಾಗಿ ಟೈಮಿಂಗ್ ನಲ್ಲಿ ಬೌಂಡರಿ ಗೆರೆಗಳ ಕಡೆಗೆ ಕಳುಹಿಸಲು ಗಮನಹರಿಸಿದ್ದೇ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನ ಪಡೆದ ಆರ್​ಸಿಬಿ, ವಿರಾಟ್ ಕೊಹ್ಲಿಯ 42 ಎಸೆತಗಳಲ್ಲಿ 70 ರನ್‌ಗಳ ಸಮಯೋಚಿತ ಇನಿಂಗ್ಸ್ ಮತ್ತು ದೇವದತ್ ಪಡಿಕ್ಕಲ್‌ರ (27 ಎಸೆತಗಳಲ್ಲಿ 50 ರನ್) ಜತೆಗಿನ ಎರಡನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟದಿಂದ 5 ವಿಕೆಟ್​ಗೆ 205 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಅಂತಿಮ ಓವರ್​ಗಳಲ್ಲಿ ಆಕ್ರಮಣಕಾರಿ ಆಟವಾಡಿದ್ದೇ ಈ ರನ್​ ಪೇರಿಸಲು ನೆರವಾಯಿತು.

ರಾಜಸ್ಥಾನ್ ರಾಯಲ್ಸ್ 110 ರನ್​ಗಳಿಗೆ 2 ವಿಕೆಟ್ ನಷ್ಟ ಮಾಡಿಕೊಂಡಉ ಉತ್ತಮ ಸ್ಥಿತಿಯಲ್ಲಿದ್ದರೂ, ನಂತರ ನಿಧಾನವಾಗಿ ಕುಸಿತ ಕಂಡಿತು. ವೇಗಿಬೌಲರ್ ಜೋಶ್ ಹ್ಯಾಜಲ್‌ವುಡ್‌ 33 ರನ್​ಗಳಿಗೆ 4 ವಿಕೆಟ್ ಉರುಳಿಸಿ ರಾಜಸ್ಥಾನ್‌ ತಂಡವನ್ನು 9 ವಿಕೆಟ್​ಗೆ 194 ರನ್​ಗಳಿಗೆ ಕಟ್ಟಿ ಹಾಕಿತು.

ಕೊಹ್ಲಿ ಹೇಳಿದ್ದೇನು?

ಪಂದ್ಯದ ನಂತರದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ, “ನಾವು ತವರಿನಲ್ಲಿ ಮೂರು ಸಾಮಾನ್ಯ ಪಂದ್ಯಗಳನ್ನಾಡಿದ್ದೇವೆ ಮತ್ತು ಬ್ಯಾಟಿಂಗ್ ಘಟಕವಾಗಿ ನಾವು ಏನನ್ನು ಸರಿಪಡಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ನಾವು ಉತ್ತಮ ಮೊತ್ತವನ್ನು ಕಲೆಹಾಕಿದೆವು. ಪಿಚ್ ಸ್ಕೋರ್ ಮಾಡುವಷ್ಟು ಅನುಕೂಲಕರವಾಗಿರಲಿಲ್ಲ. ಆದಾಗ್ಯೂ ಉತ್ತಮ ರನ್​ ಪರಿಸಲಾಗಿದೆ. ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಅವಕಾಶ ಇತ್ತು. ಆದರೂ ಅವರನ್ನು ನಿಯಂತ್ರಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಆರ್​ಸಿಬಿ ತವರಿನ ಎಲ್ಲಾ ಪಂದ್ಯಗಳಲ್ಲಿ ಟಾಸ್‌ ಸೋತಿರುವ ಬಗ್ಗೆ ಮಾತನಾಡಿದ ವಿರಾಟ್​ ಕೊಹ್ಲಿ, ಇಲ್ಲಿ ಟಾಸ್​ ಗೆಲ್ಲುವುದೇ ದೊಡ್ಡ ಸವಾಲು ಎಂದು ನಗುತ್ತಾ ಹೇಳಿದರು.

ತಂಡದ ಬ್ಯಾಟಿಂಗ್ ಕಾರ್ಯತಂತ್ರದ ಬಗ್ಗೆ ಮಾತನಾಡಿದ ಅವರು “ಈಗ ಬ್ಯಾಟಿಂಗ್​ ಟೆಂಪ್ಲೇಟ್ ಸರಳವಾಗಿದೆ. ಒಬ್ಬ ಆಟಗಾರನು ಕೊನೆಯವರೆಗೆ ಬ್ಯಾಟಿಂಗ್ ಮಾಡಬೇಕು ಮತ್ತು ಇತರರು ಅವನ ಸುತ್ತ ಆಕ್ರಮಣಕಾರಿಯಾಗಿ ಆಡಬೇಕು. ದೇವದತ್ ಮತ್ತು ನಾನು ಈ ಮೈದಾನವನ್ನು ಚೆನ್ನಾಗಿ ಅರಿತುಕೊಂಡಿದ್ದೇವೆ. ಆರಂಭದಲ್ಲಿ ಫಿಲ್ ಸಾಲ್ಟ್‌ಗೆ ಅವರ ಆಟವನ್ನಾಡಲು ಬಿಟ್ಟೆವು. ಹೊಸ ಚೆಂಡಿನೊಂದಿಗೆ ಮೊದಲ ಕೆಲವು ಓವರ್‌ಗಳಲ್ಲಿ ವೇಗ ಮತ್ತು ಬೌನ್ಸ್ ಇರುತ್ತದೆ. ಇಂದು ನಾವು ಚೆಂಡನ್ನು ಸರಿಯಾಗಿ ಟೈಮಿಂಗ್ ಮಾಡಿದೆವು. ಎದುರಾಳಿಗಳ ಮೇಲೆ ಸಾಕಷ್ಟು ಒತ್ತಡವನ್ನು ಇಟ್ಟು, ಬೌಂಡರಿ ಪಡೆಯುತ್ತಾ ಹೋದೆವು,” ಎಂದು ವಿವರಿಸಿದರು.

ಈ ಗೆಲುವು RCB ತಂಡಕ್ಕೆ ಐಪಿಎಲ್ 2025 ರಲ್ಲಿ ಮೊದಲ ತವರಿನ ಪಂದ್ಯದ ಗೆಲುವಾಗಿದೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಜೋಶ್ ಹ್ಯಾಜಲ್‌ವುಡ್‌ರ ಬೌಲಿಂಗ್ ಮತ್ತು ಕೊಹ್ಲಿ-ಪಡಿಕ್ಕಲ್‌ರ ಜೊತೆಯಾಟವು ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Read More
Next Story