
IPL 2025: ವಿರಾಟ್ ಕೊಹ್ಲಿಯಲ್ಲಿ 'ಗೋಲ್ಡ್ ಜನರೇಷನ್' ಎಂದು ಕೊಂಡಾಡಿದ ಶಾರುಖ್ ಖಾನ್
ಶಾರುಖ್ ಖಾನ್, ಅವರು ವಿರಾಟ್ ಕೊಹ್ಲಿಯವರನ್ನು ವೇದಿಕೆಗೆ ಆಹ್ವಾನಿಸಿ, ಅವರನ್ನು "GOAT" ಎಂದು ಕರೆದು ಗೌರವಿಸಿದರು. ಅಲ್ಲದೆ ಅಭಿಮಾನಿಗಳ ಬಳಿ "ಕೊಹ್ಲಿ, ಕೊಹ್ಲಿ, ಕೊಹ್ಲಿ" ಎಂದು ಕರೆಯವಂತೆ ಮನವಿ ಮಾಡಿದರು.
ಐಪಿಎಲ್ 2025ರ ಉದ್ಘಾಟನಾ ಸಮಾರಂಭದ ನಿರೂಪಣೆ ಮಾಡಿದ ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ಆರ್ಸಿಬಿ ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿಯನ್ನು 'ಗೋಲ್ಡನ್ ಜನರೇಷನ್' (ಸುವರ್ಣ ಪೀಳಿಗೆ) ಎಂದು ಕೊಂಡಾಡಿದರು. ತಮ್ಮನ್ನು 'ಓಲ್ಡ್ ಜನರೇಷನ್' (ಹಳೇ ಪೀಳಿಗೆ) ಎಂದು ಕರೆದುಕೊಂಡ ಅವರು ವಿರಾಟ್ ಕೋಹ್ಲಿಯವರನ್ನು "GOAT" (ಗ್ರೇಟೆಸ್ಟ್ ಆಫ್ ಆಲ್ ಟೈಮ್) ಮತ್ತು ಐಪಿಎಲ್‌ನ "ಗೋಲ್ಡ್ ಜನರೇಷನ್" (ಸುವರ್ಣ ಪೀಳಿಗೆ) ಎಂದು ಹೊಗಳಿದರು.
ಶಾರುಖ್ ಖಾನ್, ಅವರು ವಿರಾಟ್ ಕೊಹ್ಲಿಯವರನ್ನು ವೇದಿಕೆಗೆ ಆಹ್ವಾನಿಸಿ, ಅವರನ್ನು "GOAT" ಎಂದು ಕರೆದು ಗೌರವಿಸಿದರು. ಅಲ್ಲದೆ ಅಭಿಮಾನಿಗಳ ಬಳಿ "ಕೊಹ್ಲಿ, ಕೊಹ್ಲಿ, ಕೊಹ್ಲಿ" ಎಂದು ಕರೆಯವಂತೆ ಮನವಿ ಮಾಡಿದರು. ಅದಕ್ಕೆ ಉತ್ತಮ ಸ್ಪಂದನೆ ದೊರಕಿತು.
ಶಾರುಖ್ ಅವರ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಐಪಿಎಲ್‌ನ ಇತರ ಸ್ಟಾರ್ಗಳ "ಗೋಲ್ಡ್ ಜನರೇಷನ್"ನ ಭಾಗವಾಗಿದ್ದಾರೆ ಹಾಗೂ ಕೆಕೆಆರ್ನ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರಂಥ ಯುವ ಕ್ರಿಕೆಟ್ ಆಟಗಾರರು "ಬೋಲ್ಡ್ ಜನರೇಷನ್" (ಸಾಹಸಿ ಪೀಳಿಗೆ)ನ ಭಾಗವಾಗಿದ್ದಾರೆ.
ಶಾರುಖ್ ಅವರು, "ವಿರಾಟ್ ಕೊಹ್ಲಿ ಜತೆ ನಿಂತುಕೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ನಾನು ಅದೃಷ್ಟಶಾಲಿ" ಎಂದು ಹೇಳಿದರು. ಇದೇ ವೇಳೆ ವಿರಾಟ್ ಕೊಹ್ಲಿ ಅಂಡರ್-19 ಕ್ರಿಕೆಟ್ ಆಟಗಾರನಾಗಿದ್ದ ದಿನಗಳನ್ನು ನೆನಪಿಸಿಕೊಂಡರು.
ಗೋಲ್ಡ್ ಜನರೇಷನ್ vs ಬೋಲ್ಡ್ ಜನರೇಷನ್
ಶಾಹ್ರುಖ್ ಅವರು ವಿರಾಟ್ ಕೊಹ್ಲಿಗೆ ಪ್ರಶ್ನೆ ಮಾಡುತ್ತಾ, "ಬೋಲ್ಡ್ ಜನರೇಷನ್" ಐಪಿಎಲ್‌ನ ಮೇಲೆ ಪ್ರಭಾವ ಬೀರಬಹುದೇ ಎಂದು ಕೇಳಿದರು. ಅದಕ್ಕೆ ವಿರಾಟ್ ಕೊಹ್ಲಿ, "ಬೋಲ್ಡ್ ಜನರೇಷನ್ ಅತಿವೇಗದಲ್ಲಿ ಮುಂದೆ ಬರುತ್ತಿದೆ. ಆದರೆ ಹಲೆ ಪೀಳಿಗೆ ಇನ್ನೂ ಇದೆ. ಪ್ರಭಾವ ಬೀರಲು ಸಿದ್ಧವಿದೆ, ಇನ್ನೂ ಆಟವಾಡಲು ಸಿದ್ಧವಿದೆ. ಈ ಸುಂದರ ಅಭಿಮಾನಿಗಳಿಗಾಗಿ ಇನ್ನೂ ಹಲವು ವರ್ಷಗಳ ಕಾಲ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಲು ಆಶಿಸುತ್ತೇನೆ." ಎಂದು ಹೇಳಿದರು.
ಬಳಿಕ ಶಾರುಖ್ ಅವರು ರಿಂಕು ಸಿಂಗ್ ಜತೆ ಹಾಗೂ ವಿರಾಟ್ ಕೊಹ್ಲಿ ಜತೆ ಪಠಾಣ್ ಚಿತ್ರದ ಎರಡು ಹಾಡುಗಳಿಗೆ ಡಾನ್ಸ್ ಮಾಡಿದರು.
KKR vs RCB ಆರಂಭಿಕ ಪಂದ್ಯ
ಐಪಿಎಲ್ 2025ರ ಆರಂಭಿಕ ಪಂದ್ಯದಲ್ಲಿ ಚಾಂಪಿಯನ್ ಕೆಕೆಆರ್ ಮತ್ತು ಎಂದೂ ಕಪ್ ಗೆಲ್ಲದ ಆರ್ಸಿಬಿ ಸೆಣಸಲಿದೆ. ಇದೇ ಎರಡು ತಂಡಗಳು 2008ರಲ್ಲಿ ಐಪಿಎಲ್‌ನ ಮೊದಲ ಪಂದ್ಯವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ್ದವು.