ತಮಿಳುನಾಡು ಕಾಂಗ್ರೆಸ್ ಶಾಸಕಿ ವಿಜಯಧರಣಿ ಬಿಜೆಪಿ ಸೇರ್ಪಡೆ
x

ತಮಿಳುನಾಡು ಕಾಂಗ್ರೆಸ್ ಶಾಸಕಿ ವಿಜಯಧರಣಿ ಬಿಜೆಪಿ ಸೇರ್ಪಡೆ


ತಮಿಳುನಾಡಿನ ಕಾಂಗ್ರೆಸ್ ಶಾಸಕಿ ಎಸ್.ವಿಜಯಧರಣಿ ಅವರು ಶನಿವಾರ ಬಿಜೆಪಿ ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದೇಶಕ್ಕೆ ಬಹಳ ಮುಖ್ಯ ಎಂದಿರುವ ಅವರು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಭಾಗವಾಗಿರುವ ವಿಲವನ್‌ಕೋಡ್‌ನ ಶಾಸಕಿ. ಇದು ಹಿಂದೆ ಬಿಜೆಪಿ ಗೆದ್ದ ಕ್ಷೇತ್ರವಾಗಿದೆ. ಅವರು ಮೂರು ಬಾರಿ ಆಯ್ಕೆಯಾಗಿದ್ದಾರೆ. ಈ ಬೆಳವಣಿಗೆಯು ದಕ್ಷಿಣ ರಾಜ್ಯದಲ್ಲಿ ನೆಲೆಯೂರಲು ಹೆಣಗಾಡುತ್ತಿರುವ ಬಿಜೆಪಿಗೆ ಶಕ್ತಿ ನೀಡಿದೆ.

ಅವರು ರಾಜೀನಾಮೆ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ತಮಿಳುನಾಡಿನ ಚುನಾವಣಾ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಅವರ ಸಮ್ಮುಖದಲ್ಲಿ ದಿಲ್ಲಿಯಲ್ಲಿ ಬಿಜೆಪಿ ಸೇರಿದರು.

ʻಕೇಂದ್ರ ಸರ್ಕಾರದ ಹಲವಾರು ಉತ್ತಮ ಯೋಜನೆಗಳು ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿರುವ ತಮಿಳುನಾಡಿನಲ್ಲಿ ಜಾರಿಯಾಗುತ್ತಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻಮೋದಿ ಅವರ ಕೈ ಬಲಪಡಿಸಲು ಸಮಾಜದ ವಿವಿಧ ವರ್ಗಗಳ ಜನರು ಬಿಜೆಪಿ ಸೇರಲು ಮುಂದೆ ಬರುತ್ತಿದ್ದಾರೆʼ ಎಂದು ಮುರುಗನ್ ಹೇಳಿದರು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನ 39 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.


Read More
Next Story