ಇಂಡಿಯ ಒಕ್ಕೂಟದ ವೈಫಲ್ಯ ಖಚಿತ:  ಪಳನಿಸ್ವಾಮಿ
x

ಇಂಡಿಯ ಒಕ್ಕೂಟದ ವೈಫಲ್ಯ ಖಚಿತ: ಪಳನಿಸ್ವಾಮಿ


ಸೇಲಂ,ಜನವರಿ 24: ಕಾಂಗ್ರೆಸ್ ನೊಡನೆ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿವೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುವುದರಿಂದ ಇಂಡಿಯ ಒಕ್ಕೂಟ ಎಂದಿಗೂ ಒಮ್ಮತದಿಂದ ಹೋರಾಡಲು ಸಾಧ್ಯವಿಲ್ಲ ಎಂದು

ಎಐಎಡಿಎಂಕೆ ಮಹಾ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.

ʻಕಾಲಕ್ರಮೇಣ ಯಾರೆಲ್ಲ ಹೊರಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆʼ ಎಂದು ಹೇಳಿದ್ದಾರೆ. ಸ್ಟಾಲಿನ್ ನೇತೃತ್ವದ ಡಿಎಂಕೆ, 28 ಪಕ್ಷಗಳ ಗುಂಪಿನ ಭಾಗವಾಗಿದೆ. ವಿವಿಧ ಸಿದ್ಧಾಂತಗಳು ಮತ್ತು ಅಭಿಪ್ರಾಯಗಳನ್ನು ಹೊಂದಿರುವ ಪಕ್ಷಗಳು ಒಕ್ಕೂಟದಲ್ಲಿವೆ. ವಿಭಿನ್ನ ನಂಬಿಕೆಗಳಿಂದಾಗಿ ಸಂಘರ್ಷ ಉಂಟಾಗುತ್ತಿದೆ. ಇದರಿಂದ ಒಟ್ಟಾಗಿ ಕೆಲಸ ಮಾಡುವುದು ಕಷ್ಟಕರ ಎಂದು ಸೇಲಂ ಜಿಲ್ಲೆಯ ಎಡಪ್ಪಾಡಿಯಲ್ಲಿ ಹೇಳಿದರು. ʻಇದು ನಿರೀಕ್ಷಿತ. ಒಕ್ಕೂಟ ಯಶಸ್ವಿಯಾಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಅವರು ಮ್ಯಾಜಿಕ್ ಮಾಡಲು ಪ್ರಯತ್ನಿಸಿದರು. ಚುನಾವಣೆಗೆ ಇನ್ನೂ ಸಮಯವಿದೆ. ಅಷ್ಟರಲ್ಲಿ ಎಲ್ಲರೂ ಹೊರಬರುತ್ತಾರೆʼ ಎಂದು ಹೇಳಿದರು.

ರಾಮ ಮಂದಿರದ ಉದ್ಘಾಟನೆ ಚುನಾವಣೆಯಲ್ಲಿ ಪ್ರತಿಧ್ವನಿಸುವುದೇ ಎಂಬ ಪ್ರಶ್ನೆಗೆ ʻಸೇಲಂ ಮತ್ತುಎಡಪ್ಪಡಿ ಕ್ಷೇತ್ರದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದ್ದೇವೆ. ಮಂದಿರ ನಿರ್ಮಾಣಕ್ಕೆ ಜನ ಬೆಂಬಲ ನೀಡಲಾರಂಭಿಸಿದರೆ, ಎಲ್ಲರೂ ಮಂದಿರ ಕಟ್ಟುತ್ತಾರೆ. ವಿವಿಧ ಧರ್ಮಗಳವರು ತಮ್ಮದೇ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಾರೆʼ ಎಂದು ಹೇಳಿದರು. ʻದೇವಸ್ಥಾನಗಳನ್ನು ಕಟ್ಟಿದರೆ ಚುನಾವಣೆಯಲ್ಲಿ ಗೆಲ್ಲುವುದಾದರೆ, ಎಡಪ್ಪಡಿಯಲ್ಲಿ ಎಐಎಡಿಎಂಕೆ ಯಾವಾಗಲೂ ಅವಿರೋಧವಾಗಿ ಗೆಲ್ಲುತ್ತದೆ. ಮಂದಿರ ನಿರ್ಮಿಸಿದ ವ್ಯಕ್ತಿಯ ಕಡೆಗೆ ಹೋಗುತ್ತಾರೆ ಎನ್ನುವುದು ತಪ್ಪುʼ ಎಂದು ಪ್ರಧಾನಿ ಅವರ ಹೆಸರು ಉಲ್ಲೇಖಿಸದೆ ಹೇಳಿದರು.

ಕಳೆದ ಸೆಪ್ಟೆಂಬರ್ನಲ್ಲಿ ಎಐಎಡಿಎಂಕೆ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.

(ಪಿಟಿಐ)

Read More
Next Story