ಲೋಕಸಭೆ ಚುನಾವಣೆ: ಎಸ್ಪಿ ಮತ್ತು ಆರ್‌ಎಲ್‌ ಡಿ ಮೈತ್ರಿ
x

ಲೋಕಸಭೆ ಚುನಾವಣೆ: ಎಸ್ಪಿ ಮತ್ತು ಆರ್‌ಎಲ್‌ ಡಿ ಮೈತ್ರಿ


ಲಖ್ನೋ, ಜನವರಿ 19: ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿವೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಏಳು ಸ್ಥಾನಗಳನ್ನು ಪಕ್ಷಕ್ಕೆ ಬಿಟ್ಟುಕೊಟ್ಟಿದೆ ಎಂದು ಆರ್‌ ಎಲ್‌ ಡಿ ಹೇಳಿದೆ.

ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಆರ್‌ ಎಲ್‌ ಡಿ ಮುಖ್ಯಸ್ಥ ಜಯಂತ್ ಚೌಧರಿ,ʻಆರ್‌ ಎಲ್‌ ಡಿ ಮತ್ತು ಎಸ್ಪಿಗೆ ಅಭಿನಂದನೆಗಳು. ಗೆಲುವಿಗಾಗಿ ಒಂದಾಗೋಣʼ ಎಂದು ಅಖಿಲೇಶ್ ಯಾದವ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಮರುಪೋಸ್ಟ್ ಮಾಡಿರುವ ಚೌಧರಿ,ʼ ರಾಷ್ಟ್ರೀಯತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಸಿದ್ಧರಿದ್ದೇವೆ. ಮೈತ್ರಿ ಕೂಟದ ಸದಸ್ಯರು ತಮ್ಮ ಪ್ರದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತೇವೆ.ʼ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಪಕ್ಷ ಏಳು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಆರ್‌ಎಲ್‌ಡಿ ವಕ್ತಾರರು ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಉತ್ತರ ಪ್ರದೇಶ 80 ಸ್ಥಾನ ಹೊಂದಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಈ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಎಸ್ಪಿ 111 ಸ್ಥಾನ ಮತ್ತು ಆರ್‌ ಎಲ್‌ ಡಿ 8 ಸ್ಥಾನಗಳನ್ನು ಗೆದ್ದಿದ್ದವು. ಆರ್‌ ಎಲ್‌ ಡಿ 2019ರ ಲೋಕಸಭೆ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಭಾಗವಾಗಿತ್ತು. ಆರ್‌ ಎಲ್‌ ಡಿ ಮಥುರಾ, ಬಾಗ್ಪತ್ ಮತ್ತು ಮುಜಾಫರ್‌ ನಗರ ಕ್ಷೇತ್ರಗಳಲ್ಲಿ ಸೋತಿತು. ಎಸ್ಪಿ 5 ಮತ್ತು ಬಿಎಸ್ಪಿ 10 ಸ್ಥಾನಗಳನ್ನು ಗೆದ್ದವು. ಮುಜಾಫರ್‌ ನಗರ, ಖೈರಾನಾ, ಬಿಜ್ನೋರ್, ಮಥುರಾ, ಬಾಗ್ಪತ್, ಅಮ್ರೋಹಾ ಮತ್ತು ಮೀರತ್ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಜಾಟ್ ಸಮುದಾಯದವರಿದ್ದು,ಈ ಕ್ಷೇತ್ರಗಳಲ್ಲಿ ಆರ್‌ ಎಲ್‌ ಡಿ ಸ್ಪರ್ಧಿ ಸುವ ಸಾಧ್ಯತೆ ಇದೆ.ಆರ್‌ ಎಲ್‌ ಡಿಗೆ ಚೌಧರಿ ಅವರನ್ನು ರಾಜ್ಯಸಭೆಗೆ ಕಳುಹಿಸುವಷ್ಟು ಶಕ್ತಿ ಇರಲಿಲ್ಲ. ಎಸ್ಪಿ ಅವರ ಉಮೇದುವಾರಿಕೆಯನ್ನು ಬೆಂಬಲಿಸಿತು.

ಈ ಎರಡೂ ಪಕ್ಷಗಳು ಇಂಡಿಯ ಒಕ್ಕೂಟದ ಭಾಗವಾಗಿದ್ದು, ಸೀಟು ಹಂಚಿಕೆಗೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡಬೇಕಿದೆ.

(ಪಿಟಿಐ)

Read More
Next Story