ಕಾಂಗ್ರೆಸ್‌ ಮರು ಸೇರ್ಪಡೆಗೊಂಡ  ಒಡಿಶಾ ಮಾಜಿ ಸಿಎಂ
x

ಕಾಂಗ್ರೆಸ್‌ ಮರು ಸೇರ್ಪಡೆಗೊಂಡ ಒಡಿಶಾ ಮಾಜಿ ಸಿಎಂ


ನವದೆಹಲಿ, ಜನವರಿ 17 (ಪಿಟಿಐ): ಕಾಂಗ್ರೆಸ್ ತೊರೆದ ಒಂಬತ್ತು ವರ್ಷಗಳ ನಂತರ ಒಡಿಶಾದ ಮಾಜಿ ಮುಖ್ಯಮಂತ್ರಿ ಗಿರಿಧರ್ ಗಮಾಂಗ್ ಅವರು ಪತ್ನಿ ಮತ್ತು ಪುತ್ರನೊಂದಿಗೆ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ.

ಕೊರಾಪುಟ್‌ ಕ್ಷೇತ್ರದಿಂದ ಒಂಬತ್ತು ಬಾರಿ ಸಂಸದರಾಗಿದ್ದ ಅವರು 2015 ರಲ್ಲಿ ಬಿಜೆಪಿಗೆ ಮತ್ತು ಜನವರಿ 2023 ರಲ್ಲಿ ಬಿಆರ್ಎಸ್ಗೆ ಸೇರ್ಪಡೆಗೊಂಡಿದ್ದರು. ʻದೇಶದಲ್ಲಿ ತತ್ವ ರಾಜಕಾರಣ ಮಾಡುವ ಏಕೈಕ ಪಕ್ಷ ಕಾಂಗ್ರೆಸ್. ತಾವು ಪಕ್ಷದ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಎಂದಿಗೂ ತೊರೆದಿಲ್ಲʼ ಎಂದು ಗಮಾಂಗ್ ಹೇಳಿದರು.

ಪತ್ನಿ ಹೇಮಾ ಗಮಾಂಗ್, ಪುತ್ರ ಶಿಶಿರ್ ಗಮಾಂಗ್ ಮತ್ತು ಮಾಜಿ ಸಂಸದ ಸಂಜಯ್ ಭೋಯ್ ಅವರೊಂದಿಗೆ ಪಕ್ಷದ ಖಜಾಂಚಿ ಅಜಯ್ ಮಾಕನ್ ಮತ್ತು ಒಡಿಶಾದ ಎಐಸಿಸಿ ಉಸ್ತುವಾರಿ ಅಜಯ್ ಕುಮಾರ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. 1972 ರಲ್ಲಿ ಕೊರಾಪುಟ್ನಿಂದ ಐದನೇ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ಅವರು ಆನಂತರ 1977, 1980, 1984, 1989, 1991, 1996, 1998 ಮತ್ತು 2004 ರಲ್ಲಿ ಮರು ಆಯ್ಕೆಯಾದರು. ಫೆಬ್ರವರಿ 17, 1999 ರಿಂದ ಡಿಸೆಂಬರ್ 6, 1999 ರವರೆಗೆ ಒಡಿಷಾದ ಮುಖ್ಯಮಂತ್ರಿ ಆಗಿದ್ದರು. ಹೇಮಾ ಗಮಾಂಗ್ ಅವರು 1999 ರಲ್ಲಿ 13 ನೇ ಲೋಕಸಭೆ ಚುನಾವಣೆಯಲ್ಲಿ ಕೊರಾಪುಟ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಸಂಜಯ್ ಭೋಯ್ ಅವರು 2009ರಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಒಡಿಶಾದ ಬರ್ಗರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆ ಕುರಿತ ಪ್ರಶ್ನೆಗೆ ಉತ್ತರಿಸಿ,ʻರಾಹುಲ್ ಗಾಂಧಿ ಅವರ ನಡೆಗಳು ರಾಜಕೀಯ ಪ್ರೇರಿತವಲ್ಲ. ಅದು ಸಾಂವಿಧಾನಿಕ. ನಾವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆʼ.

(ಪಿಟಿಐ)

Read More
Next Story