ಕರ್ನಾಟಕ– ಕೇರಳ ದಿವಾಳಿ ಬ್ರದರ್ಸ್:  ಬಿಜೆಪಿ ಟ್ರೋಲ್!
x
ಬಿಜೆಪಿ ಟ್ರೋಲ್‌ ಮಾಡಿರುವ ಚಿತ್ರ

ಕರ್ನಾಟಕ– ಕೇರಳ ದಿವಾಳಿ ಬ್ರದರ್ಸ್: ಬಿಜೆಪಿ ಟ್ರೋಲ್!

ಕರ್ನಾಟಕ ಸರ್ಕಾರದ ಅವಾಸ್ತವಿಕ ಆರ್ಥಿಕ ನೀತಿಗಳು ಹಾಗೂ ಮಿತಿ ಮೀರಿದ ಸಾಲ ಕರ್ನಾಟಕವನ್ನು ಸಹ ದಿವಾಳಿಯತ್ತ ತಳ್ಳಿದ್ದು, ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ ₹1 ಲಕ್ಷ ರೂಪಾಯಿಯಷ್ಟು ಸಾಲವಿದೆ ಎಂದು ಬಿಜೆಪಿ ದೂರಿದೆ.


ಕರ್ನಾಟಕ ಹಾಗೂ ಕೇರಳ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಯಿಂದ ಎರಡೂ ರಾಜ್ಯಗಳು ಆರ್ಥಿಕ ದಿವಾಳಿಯಾಗುತ್ತಿವೆ. ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳು ʼದಿವಾಳಿ ಬ್ರದರ್ಸ್ʼ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕರ್ನಾಟಕ ಬಿಜೆಪಿಯು ಎರಡೂ ರಾಜ್ಯಗಳ ಆರ್ಥಿಕ ನೀತಿಯನ್ನು ಖಂಡಿಸಿದೆ. ಕಮ್ಯುನಿಸ್ಟ್ ನೀತಿಗಳು ಹಾಗೂ ಪಿಣರಾಯಿ ಸರ್ಕಾರದ ಉಚಿತ ಕೊಡುಗೆಗಳಿಂದ ಕೇರಳದ ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದ್ದು, ಕೇರಳ ಆರ್ಥಿಕವಾಗಿ ಸಂಪೂರ್ಣ ದಿವಾಳಿಯತ್ತ ಮುನ್ನುಗ್ಗುತ್ತಿದೆ ಎಂದು ಹೇಳಿದೆ.

ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ. ಕೇರಳ ಸರ್ಕಾರವು 10 ಸಾವಿರ ಕೋಟಿ ರೂಪಾಯಿ ಹೆಚ್ಚಿನ ಸಾಲಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 2023-24ರ ಆರ್ಥಿಕ ವರ್ಷದಲ್ಲಿ ಮಧ್ಯಂತರ ಪರಿಹಾರವಾಗಿ ಹೆಚ್ಚಿನ ಸಾಲಕ್ಕೆ ಅನುಮತಿ ನೀಡಬೇಕು ಎಂಬ ಕೇರಳದ ಮನವಿಯನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಕೆ. ವಿಶ್ವನಾಥನ್ ಅವರಿದ್ದ ಪೀಠ ತಿರಸ್ಕರಿಸಿದೆ. ಈ ವಿಷಯವನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.

ಕರ್ನಾಟಕದಲ್ಲಿ ಸಹ ಇದೇ ಕಥೆ. ಕರ್ನಾಟಕ ಸರ್ಕಾರದ ಅವಾಸ್ತವಿಕ ಆರ್ಥಿಕ ನೀತಿಗಳು ಹಾಗೂ ಮಿತಿ ಮೀರಿದ ಸಾಲ ಕರ್ನಾಟಕವನ್ನು ಸಹ ದಿವಾಳಿಯತ್ತ ತಳ್ಳಿದ್ದು, ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ ₹1 ಲಕ್ಷ ರೂಪಾಯಿಯಷ್ಟು ಸಾಲವಿದೆ ಎಂದು ಬಿಜೆಪಿ ದೂರಿದೆ. ಇನ್ನು ಸ್ವಯಂ ಘೋಷಿತ ಆರ್ಥಿಕ ತಜ್ಞ ಸಿ.ಎಂ ಸಿದ್ದರಾಮಯ್ಯ ಅವರು, ತಮ್ಮ ತುಘಲಕ್ ಆರ್ಥಿಕ ನೀತಿಗಳಿಂದ ಕರ್ನಾಟಕವನ್ನು ದಿವಾಳಿ ಮಾಡಿಯೇ "ಸಿದ್ದ" ಎನ್ನುತ್ತಾ, ಅಭಿವೃದ್ಧಿಗೆ ಬಿಡಿಗಾಸು ಹಣ ಬಿಡುಗಡೆ ಮಾಡದೆ, ಕಾಲಾಹರಣ ಮಾಡುತ್ತಿದ್ದಾರೆ. ತಮ್ಮ ಆಡಳಿತ ವೈಫಲ್ಯವನ್ನು ಜನರಿಂದ ಮರೆ ಮಾಚಲು ಕಾಂಗ್ರೆಸ್ ಎಂದಿನಂತೆ ಕೇಂದ್ರ ಸರ್ಕಾರದ ಮೇಲೆ ಇನ್ನಿಲ್ಲದ ಆರೋಪ ಮಾಡುತ್ತಿದೆ ಎಂದೂ ಬಿಜೆಪಿ ಆರೋಪಿಸಿದೆ.

ದಿವಾಳಿ ಬ್ರದರ್ಸ್ ಎಂದು ಟ್ರೋಲ್

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಚಿತ್ರ ಬಳಸಿ ದಿವಾಳಿ ಬ್ರದರ್ಸ್ ಎಂದು ಟ್ವೀಟ್ ಮಾಡಿರುವ ಬಿಜೆಪಿ, ಉಂಡು ಹೋದ ಕೊಂಡು ಹೋದ ಗಾದೆಯ ಅವತಾರವೇ ಈ ʼದಿವಾಳಿ ಬ್ರದರ್ಸ್ʼ ಎಂದಿದೆ. ಅಲ್ಲದೇ ಕೇರಳ ದಿವಾಳಿಯಾಗಿದ್ದು, ಕರ್ನಾಟಕ ದಿವಾಳಿಯಾಗುವ ಕ್ಯೂನಲ್ಲಿದೆ ಎಂದು ವ್ಯಂಗ್ಯವಾಡಿದೆ.

Read More
Next Story