ಜೆ-ಕೆ, ಲಡಾಖ್ನಲ್ಲಿ ಎಲ್ಲ ಸ್ಥಾನಗಳಲ್ಲಿ ಗೆಲುವು: ಕಾಂಗ್ರೆಸ್   INDIA bloc will win all LS seats in J-K, Ladakh: Congresss Bharat Solanki
x

ಜೆ-ಕೆ, ಲಡಾಖ್ನಲ್ಲಿ ಎಲ್ಲ ಸ್ಥಾನಗಳಲ್ಲಿ ಗೆಲುವು: ಕಾಂಗ್ರೆಸ್ INDIA bloc will win all LS seats in J-K, Ladakh: Congress's Bharat Solanki


ಜಮ್ಮು, ಜನವರಿ 17 (ಪಿಟಿಐ): ಇಂಡಿಯ ಒಕ್ಕೂಟವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖಿನ ಎಲ್ಲ ಲೋಕಸಭೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ಭರತ್ ಸಿಂಗ್ ಸೋಧಿ ಹೇಳಿದರು.

ಇಂಡಿಯ ಒಕ್ಕೂಟ ಜಮ್ಮು ಮತ್ತು ಕಾಶ್ಮೀರದ ಐದು ಲೋಕಸಭೆ ಸ್ಥಾನಗಳಲ್ಲದೆ ಲಡಾಖ್ನ ಒಂದು ಸ್ಥಾನವನ್ನೂ ಗೆಲ್ಲಲಿದೆ. ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಂತಹ ನಿರ್ಣಾಯಕ ವಿಷಯಗಳನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ಪಕ್ಷದ ಕಾರ್ಯಾಧ್ಯಕ್ಷ ರಾಮನ್ ಭಲ್ಲಾ, ತಮ್ಮ ಪಕ್ಷ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ ಎಂದು ಹೇಳಿದರು.

(ಪಿಟಿಐ)

Read More
Next Story