ಗೌಡರ ದಾಳ; ಡಿಕೆ ಸುರೇಶ್‌ಗೆ ಎದುರಾಳಿಯಾಗಿ ಬಿಜೆಪಿಯಿಂದ ಡಾ. ಮಂಜುನಾಥ್
x

ಗೌಡರ ದಾಳ; ಡಿಕೆ ಸುರೇಶ್‌ಗೆ ಎದುರಾಳಿಯಾಗಿ ಬಿಜೆಪಿಯಿಂದ ಡಾ. ಮಂಜುನಾಥ್


ನಿರೀಕ್ಷಿಸಿದಂತೆ ಖ್ಯಾತ ಹೃದ್ರೋಗ ತಜ್ಞ ಸಿಎನ್ ಮಂಜುನಾಥ್ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ಕಲ್ಪಸಿದೆ. ಈ ಮೂಲಕ ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್ ನ ಡಿಕೆ ಸುರೇಶ್ ಅವರಿಗೆ ಸೆಡ್ಡು ಹೊಡೆದಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿಗೆ ಸವಾಲಿನ ಕ್ಷೇತ್ರವಾಗಿದೆ. ಏಕೆಂದರೆ, ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರ ಭದ್ರಕೋಟೆಗೆ ಲಗ್ಗೆ ಹಾಕುವುದು ಹೇಗೆ ಎಂದು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷವಾದ ಜೆಡಿಎಸ್ ಚಿಂತಿತವಾಗಿತ್ತು. ಇಂತಹ ಸಂದರ್ಭದಲ್ಲಿ ದೇವೇಗೌಡರು ಉರುಳಿಸಿದ ದಾಳದ ಪರಿಣಾಮವಾಗಿ ಅವರ ಅಳಿಯ ಸಿಎನ್ ಮಂಜುನಾಥ್ ಬಿಜೆಪಿ ಚಿಹ್ನೆಯ ಮೇಲೆಯೇ ಸ್ಪರ್ಧಿಸುವಂತಾಗಿದೆ.

ರಾಜಕಾರಣದಿಂದ ದೂರವೇ ಉಳಿದಿದ್ದ ದೇವೇಗೌಡರ ಕುಟುಂಬದ ಮಂಜುನಾಥ್, ಒಲ್ಲದ ಮನಸ್ಸಿನಿಂದಲೇ ರಾಜಕೀಯಕ್ಕೆ ಇಳಿಯುವಂತಾಗಿದೆ. ಈ ಮೊದಲು ಅವರು ಸುತಾರಾಂ ಒಪ್ಪುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಪ್ರಬಲ ಒಕ್ಕಲಿಗ ಸಮುದಾಯದ ಮಠಾಧೀಶರು ಕಿವಿಮಾತು ಹೇಳಿ ʼʼಇದು ಸಮುದಾಯದ ಪ್ರತಿಷ್ಠೆಯ ಪ್ರಶ್ನೆʼʼ ಎಂದ ಕಾರಣ ಮಂಜುನಾಥ್ ಅಂತಿಮವಾಗಿ ಒಪ್ಪಿಗೆ ನೀಡಿದರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಡಾ. ಮಂಜುನಾಥ್ ಅವರು ಇತ್ತೀಚೆಗಷ್ಟೇ ಜಯದೇವ ಹೃದ್ರೋಗ ಸಂಸ್ಥೆಯ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು, ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಮೊದಲ ಹೆಸರಾಗಿ ಚುನಾವಣೆ ಕಣಕ್ಕೆ ಇಳಿದಿರುವ ಡಿಕೆ ಸುರೇಶ್ ಅವರನ್ನು ಮಣಿಸಲು ಬಿಜೆಪಿ ಮತ್ತು ಜೆಡಿಎಸ್ ಯಾವ ಅಸ್ತ್ರ ಹೂಡಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಡಿತ್ತು. ಈ ಸಂದರ್ಭದಲ್ಲಿಯೇ ಮುನ್ನೆಲೆಗೆ ಬಂದ ಹೆಸರು ಡಾ. ಮಂಜುನಾಥ್ ಅವರದ್ದು. ʼʼಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮವಾಗಿ ಬಿಜೆಪಿಗೆ ದಕ್ಕಿದ ಲಾಭ ಇದುʼʼ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ದ ಫೆಡೆರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್ ಕಳೆದ ಲೋಕಸಭಾ ಚುನಾಚವಣೆಯಲ್ಲಿ ಗಳಿಸಿದ್ದ ಒಂದೇಒಂದು ಕ್ಷೇತ್ರವನ್ನು ಕಿತ್ತುಕೊಳ್ಳುವುದು ಬಿಜೆಪಿ ಹಾಗೂ ಜೆಡಿಎಸ್ ಸೃಷ್ಟಿಸಿದ ಚಕ್ರವ್ಯೂಹದ ಪರಿಣಾಮವಿದು ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ತತ್ಕ್ಷಣದ ಪ್ರತಿಕ್ರಿಯೆ...

Read More
Next Story