
ಸೀಟು ಹಂಚಿಕೆ ಸುಗಮ: ಅಖಿಲೇಶ್ ಯಾದವ್
ಜಬಲ್ಪುರ(ಮಧ್ಯಪ್ರದೇಶ),ಜನವರಿ 17: ʼಇಂಡಿಯʼ ಒಕ್ಕೂಟದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ.ಮಧ್ಯಪ್ರದೇಶದ ಚುನಾವಣೆ ವೇಳೆ ಕಾಂಗ್ರೆಸ್ ಜೊತೆ ಇದ್ದ ವೈಮನಸ್ಸು ಭೂತಕಾಲದ ವಿಷಯ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬುಧವಾರ ಹೇಳಿದರು.
ವೈಯಕ್ತಿಕ ಭೇಟಿ ವೇಳೆ ಪತ್ರಕರ್ತರ ಜತೆ ಮಾತನಾಡಿ, ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ಜೊತೆಗೆ ಚರ್ಚೆ ನಡೆಯುತ್ತಿದೆ. ಸೀಟು ಹಂಚಿಕೆ ಸಮರ್ಪಕವಾಗಲಿದೆ ಂಬ ಆತ್ಮವಿಶ್ವಾಸವಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಬಿಜೆಪಿಯನ್ನು ಸೋಲಿಸಲಿವೆʼ ಎಂದು ಹೇಳಿದರು.
ಕಳೆದ ವರ್ಷ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ವಿಫಲವಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿ,ʻಅದು ಹಳೆಯ ವಿಷಯ. ನಾವು ಮುಂದೆ ಹೋಗುತ್ತಿದ್ದೇವೆ ಮತ್ತು ಮುಂದೆ ನೋಡುತ್ತಿದ್ದೇವೆ. ರಾಜ್ಯದಲ್ಲಿನ ವಿಧಾನಸಭೆ ಚುನಾವಣೆಯ ಫಲಿತಾಂಶ ಅನಿರೀಕ್ಷಿತ. ನಾವು ನಿರಾಶರಾಗಿಲ್ಲ. ಸಮಾಜವಾದಿ ಪಕ್ಷ ಪ್ರಮುಖ ಪಾತ್ರ ವಹಿಸಲಿದೆʼ ಎಂದು ಹೇಳಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್ಪಿ ನಾಯಕಿ ಮಾಯಾವತಿ ಅವರ ಮೇಲೆ ಕೋಪವಿಲ್ಲ. ಸಮಾಜವಾದಿ ಸಿದ್ಧಾಂತವು ಪಿಡಿಎ(ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳು) ಗಳಿಗೆ ಗೌರವ ಕೊಡುವುದರಲ್ಲಿ ನಂಬಿಕೆ ಇಟ್ಟಿದೆʼ ಎಂದರು. ʻಈ ಜನರನ್ನು ಸರ್ಕಾರದಿಂದ ಗೌರವಿಸಿದಾಗ ರಾಮರಾಜ್ಯ ಬರುತ್ತದೆ. ಅವರಲ್ಲಿರುವ ಅನಕ್ಷರತೆ, ಅಸಮಾನತೆಯನ್ನುಹೋಗಲಾಡಿಸಬೇಕು ಜನವರಿ 22 ಮಂಗಳಕರ ದಿನ. ಆದರೆ, ಅದನ್ನು ಪ್ರಚಾರ ಮಾಡುವವರು 'ರಾಮ ರಾಜ್ಯ' ಎಂದರೆ ಏನು ಎಂಬುದನ್ನು ಕನಿಷ್ಠ ಯೋಚಿಸಬೇಕು. ಸಂವಿಧಾನವನ್ನು ಅನುಸರಿಸುವುದೇ ರಾಮರಾಜ್ಯʼ ಎಂದು ಹೇಳಿದರು.
(ಪಿಟಿಐ)

