Yajamana4K : 25 ವರ್ಷಗಳ ಬಳಿಕ ಮರಳಿದ 'ಯಜಮಾನ'; ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ!

7 Nov 2025 5:29 PM IST

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ಹೆಸರು 'ಯಜಮಾನ'. 2000ನೇ ಇಸವಿ ಡಿಸೆಂಬರ್ 1 ರಂದು ತೆರೆಕಂಡು, ಬಾಕ್ಸ್ ಆಫೀಸ್‌ನಲ್ಲಿ 35 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ, 130ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿದ್ದ ವಿಷ್ಣುವರ್ಧನ್ ಅಭಿನಯದ ಈ ಚಿತ್ರ, ಈಗ 25 ವರ್ಷಗಳ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಲು, 'ಯಜಮಾನ' ಚಿತ್ರವನ್ನು ಸಂಪೂರ್ಣವಾಗಿ 4K ರೆಸಲ್ಯೂಷನ್‌ಗೆ ಡಿಜಿಟಲೀಕರಣಗೊಳಿಸಲಾಗಿದೆ. ಅಷ್ಟೇ ಅಲ್ಲ, ಹಳೆಯ ಮೋನೋ ಸೌಂಡ್ ಅನ್ನು ಅತ್ಯಾಧುನಿಕ ಡಾಲ್ಬಿ ಅಟ್ಮಾಸ್ 7.1 ಸೌಂಡ್‌ಗೆ ಅಪ್‌ಗ್ರೇಡ್ ಮಾಡಿ, ಇಂದಿನ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಇಂದು ಮರುಬಿಡುಗಡೆ ಮಾಡಲಾಗಿದೆ. ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್, ಅಭಿಜಿತ್ ಸೇರಿದಂತೆ ಬೃಹತ್ ತಾರಾಗಣವಿದ್ದ ಈ ಚಿತ್ರದ ಮರುಸೃಷ್ಟಿಯ ರೋಚಕ ಕಥೆ ಇಲ್ಲಿದೆ ನೋಡಿ.