'ನಿಮ್ಮ ಡೆಲಿವರಿ ಟೈಮ್‌ಗೆ ಆಸ್ಪತ್ರೆ ಕೊಡ್ತೀವಿ': ಪತ್ರಕರ್ತೆಯ ಪ್ರಶ್ನೆಗೆ ದೇಶಪಾಂಡೆ ಅಸೂಕ್ಷ್ಮ ಉತ್ತರ, ವಿವಾದ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿಗೆ ಸುಸಜ್ಜಿತ ಆಸ್ಪತ್ರೆ ಯಾವಾಗ ಸಿಗುತ್ತದೆ ಎಂದು ಪ್ರಶ್ನಿಸಿದ ಮಹಿಳಾ ಪತ್ರಕರ್ತೆಯೊಬ್ಬರಿಗೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಳಿಯಾಳ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ನೀಡಿದ ಅಸೂಕ್ಷ್ಮ ಮತ್ತು ಅವಹೇಳನಕಾರಿ ಉತ್ತರ ತೀವ್ರ ವಿವಾದಕ್ಕೆ ಕಾರಣವಾಗಿದೆ.
