"ಬಜೆಟ್‌ನಲ್ಲಿ ರೈತರಿಗೆ ಸಿಗುತ್ತಾ ನ್ಯಾಯ?" ಸಿದ್ದರಾಮಯ್ಯ ಸರ್ಕಾರಕ್ಕೆ ಚಾಮರಸ ಮಾಲಿ ಪಾಟೀಲ್ ಒತ್ತಾಯ!

6 March 2026 9:28 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಬೆನ್ನೆಲುಬಾಗಿರುವ ಕೃಷಿ ವಲಯ ಈ ಬಾರಿ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ಅವರು ರೈತರ ಪ್ರಮುಖ ಬೇಡಿಕೆಗಳು ಮತ್ತು ನಿರೀಕ್ಷೆಗಳ ಬಗ್ಗೆ ಹಂಚಿಕೊಂಡಿರುವ ವಿಚಾರಗಳು ಇಲ್ಲಿವೆ. "ಈ ಬಾರಿಯ ಬಜೆಟ್ ಕೇವಲ ಅಂಕಿಅಂಶಗಳಿಗೆ ಸೀಮಿತವಾಗಬಾರದು, ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತಿರಬೇಕು" ಎಂದು ಚಾಮರಸ ಮಾಲಿ ಪಾಟೀಲ್ ಅವರು ಸರ್ಕಾರದ ಗಮನ ಸೆಳೆದಿದ್ದಾರೆ. ಸಾಲ ಮನ್ನಾ, ಕೃಷಿ ಸಲಕರಣೆಗಳ ಮೇಲಿನ ಸಬ್ಸಿಡಿ ಮತ್ತು ವೈಜ್ಞಾನಿಕ ಬೆಲೆ ನಿಗದಿಯ ಕುರಿತು ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.