ಕಬ್ಬಿನ ಬವಣೆ| ಬಾಗಲಕೋಟೆಯಲ್ಲಿ ಧಗಧಗಿಸಿದ ಕಬ್ಬು, ರೈತರ ಹೋರಾಟ ಮುಂದುವರಿದಿದ್ದು ಏಕೆ?
ಇತ್ತೀಚೆಗೆ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿದರೂ ಬಾಗಲಕೋಟೆಯಲ್ಲಿ ಕಬ್ಬಿನ ಜ್ವಾಲೆ ಭುಗಿಲೆದ್ದಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ 100ಕ್ಕೂ ಹೆಚ್ಚು ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆಯಲ್ಲಿ ರೈತರ ಬಿರುಕು ದಟ್ಟವಾಗಿ ಕಂಡು ಬಂದಿದೆ. ಕಬ್ಬು ಬೆಳೆಗಾರರ ಹೋರಾಟ ಬೇರೆ ಜಿಲ್ಲೆಯಲ್ಲೇ ಒಂದು ರೀತಿಯದ್ದಾದರೆ, ಬಾಗಲಕೋಟೆ ಜಿಲ್ಲೆಯ ಹೋರಾಟದ ತೂಕವೇ ಬೇರೆ. ಇಲ್ಲಿ ರೈತರು ಎಂದಿಗೂ ಸರ್ಕಾರ ಘೋಷಿಸುವ ಎಫ್‌ಆರ್‌ಪಿ ಒಪ್ಪಿದ ಉದಾಹರಣೆಯೇ ಇಲ್ಲ. ಕಾರ್ಖಾನೆ ಹಾಗೂ ರೈತರ ನಡುವೆ ನಡೆಯುವ ಒಪ್ಪಂದವೇ ಅಂತಿಮ. ಅದಾದ ಮೇಲೆಯೇ ಕಬ್ಬು ನುರಿಸುವ ಹಂಗಾಮು ಶುರುವಾಗುತ್ತದೆ.


