ಭಾರತದ ಸ್ಪಿನ್ ಕೋಟೆಯಲ್ಲಿ ದಕ್ಷಿಣ ಆಫ್ರಿಕಾ ಪ್ಲಾನ್ ಏನು? | Team India Probable XI

14 Nov 2025 8:01 PM IST

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಹೈ-ವೋಲ್ಟೇಜ್​​ ಸರಣಿಯ ಸಂಪೂರ್ಣ ವಿಶ್ಲೇಷಣೆ. ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ, ತವರಿನಲ್ಲಿ ಅಜೇಯವಾಗಿರುವ ಭಾರತದ ಕೋಟೆಯನ್ನು ಭೇದಿಸಲು ಸಜ್ಜಾಗಿದೆ. ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಸಮರ ಆರಂಭ! ತವರಿನಲ್ಲಿ 'ಟೈಗರ್ಸ್' ಎನಿಸಿಕೊಂಡಿರುವ ಟೀಮ್ ಇಂಡಿಯಾಕ್ಕೆ ವಿಶ್ವ ಚಾಂಪಿಯನ್ನರ ಸವಾಲು. ಯುವ ನಾಯಕ ಶುಭಮನ್ ಗಿಲ್ ಪಡೆ, ಕಗಿಸೊ ರಬಾಡ ಬಳಗವನ್ನು ಹೇಗೆ ಎದುರಿಸಲಿದೆ? ಭಾರತದ ಸ್ಪಿನ್ ಜಾಲಕ್ಕೆ ಹರಿಣಗಳು ಮತ್ತೊಮ್ಮೆ ಬಲಿಯಾಗುವುದೇ? ಈ ವಿಡಿಯೋದಲ್ಲಿ ಸಂಪೂರ್ಣ ಪ್ರಿ-ಮ್ಯಾಚ್ ವಿಶ್ಲೇಷಣೆ, ಎರಡೂ ತಂಡಗಳ ಸಂಭಾವ್ಯ XI, ಮತ್ತು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದಾದ ಪ್ರಮುಖ ಅಂಶಗಳನ್ನು ಚರ್ಚಿಸಿದ್ದೇವೆ.