ಅಭಿವೃದ್ಧಿಯೋ? ಅರಣ್ಯ ವಿನಾಶವೋ? | ಪಶ್ಚಿಮ ಘಟ್ಟಗಳ ಒಡಲು ಸೀಳುತ್ತಿರುವ ಮೆಗಾ ಪ್ರಾಜೆಕ್ಟ್‌ಗಳ ಭೀಕರ ಸತ್ಯ!

10 Jun 2026 7:12 PM IST

ಪಶ್ಚಿಮ ಘಟ್ಟಗಳು ಭಾರತದ ಜೀವನಾಡಿ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಸುರಂಗ ಮಾರ್ಗಗಳು, ರೈಲ್ವೆ ಯೋಜನೆಗಳು ಮತ್ತು ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗಳು ಪರಿಸರವಾದಿಗಳಲ್ಲಿ ಗಂಭೀರ ಆತಂಕ ಮೂಡಿಸಿವೆ. ಶೆಟ್ಟಿಹಳ್ಳಿ, ಸೋಮೇಶ್ವರ, ಕುದುರೆಮುಖ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಂತಹ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳಲ್ಲಿ ಲಕ್ಷಾಂತರ ನಿತ್ಯಹರಿದ್ವರ್ಣ ಮರಗಳನ್ನು ಕಡಿಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಾಡಿನ ಮಧ್ಯೆ 30 ರಿಂದ 45 ಮೀಟರ್ ಅಗಲದ ಹೆದ್ದಾರಿಗಳು ನಿರ್ಮಾಣವಾದರೆ ವನ್ಯಜೀವಿಗಳ ವಲಸೆ ಮಾರ್ಗಗಳಿಗೆ ಏನಾಗಲಿದೆ? ಮಾನವ-ಪ್ರಾಣಿ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆಯೇ? ಪರಿಸರವಾದಿ ಅಖಿಲೇಶ್ ಚಿಪ್ಪಳಿ ವ್ಯಕ್ತಪಡಿಸಿರುವ ಆತಂಕಗಳು, ಪಶ್ಚಿಮ ಘಟ್ಟಗಳ ಪರಿಸರ ಮಹತ್ವ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಂಘರ್ಷದ ಕುರಿತು ಈ ವಿಶೇಷ ವರದಿಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.