ಸುವರ್ಣಸೌಧ‌ಕ್ಕೆ ಭೂಮಿ ಕೊಟ್ಟ ಗ್ರಾಮದಲ್ಲೇ ನೀರಿಗೆ ಹಾಹಾಕಾರ: ಕೂಗಳತೆಯಲ್ಲಿ ಅಧಿವೇಶನ ನಡೆದರೂ ನೀಗದ ನೀರಿನ ಬರ

15 Dec 2025 6:28 PM IST

ಬೆಳಗಾವಿಯ ಸುವರ್ಣಸೌಧ ಹಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಸುವರ್ಣಸೌಧ ಪಕ್ಕದಲ್ಲೇ ಇರುವ ಹಲಗಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಸುವರ್ಣಸೌಧ ನಿರ್ಮಾಣಕ್ಕೆ ಹಲಗಾ ಗ್ರಾಮದಿಂದ ಭೂಮಿ ಸಹ ಹೋಗಿದೆ. ಇಡೀ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸುವರ್ಣಸೌಧದ ಕೂಗಳತೆಯಲ್ಲಿರುವ ಹಲಗಾ ಗ್ರಾಮದ ನೀರಿನ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲ. ನೀರು ಯಾವಾಗ ಬರುತ್ತದೆ ಅಂತಾ ಗೊತ್ತಿಲ್ಲ ಕೆಲವೊಮ್ಮೆ ವಾರವಾದರೂ ಬರಲ್ಲ, ಈ ಬಗ್ಗೆ 'ದ ಫೆಡರಲ್ ಕರ್ನಾಟಕ' ಹಲಗಾ ಗ್ರಾಮದ ಜನತೆಯನ್ನು ಮಾತನಾಡಿಸಿ ವರದಿ ಮಾಡಿದೆ.