ಡಿಕೆಶಿ ಬಣದ ಅಹಿಂದ ಶಾಸಕರಿಗೆ ಎಚ್ಚರಿಕೆ, ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ದಲಿತರನ್ನು ಸಿಎಂ ಮಾಡಿ ಎಂದು ಅಹಿಂದ ಒಕ್ಕೂಟ ಆಗ್ರಹ

27 Nov 2025 8:48 PM IST

ಸಿಎಂ ಸ್ಥಾನದ ಬದಲಾವಣೆ ಸುದ್ದಿಗಳ ಬೆನ್ನಲ್ಲೇ ಸಿದ್ದರಾಮಯ್ಯ‌ ಪರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಹಾಗು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಅಖಾಡಕ್ಕಿಳಿದಿದೆ. ಒಕ್ಕೂಟದ ಅಧ್ಯಕ್ಷ ಕೆ. ಎಂ . ರಾಮಚಂದ್ರಪ್ಪ ʼದ ಫೆಡರಲ್ ಕರ್ನಾಟಕʼ ಸಂದರ್ಶನದಲ್ಲಿ ಹೈಕಮಾಂಡ್ ಹಾಗು ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಡಿಕೆಶಿ ಪರ ನಿಂತ ಒಕ್ಕಲಿಗ ಸ್ವಾಮೀಜಿಯ ಹೇಳಿಕೆಯ ಬಗ್ಗೆಯೂ ಮಾತನಾಡಿದ್ದಾರೆ.