ಡಿಕೆಶಿ ಬಣದ ಅಹಿಂದ ಶಾಸಕರಿಗೆ ಎಚ್ಚರಿಕೆ, ಸಿಎಂ ಬದಲಾವಣೆ ಮಾಡಿದರೆ ದಲಿತರನ್ನು ಸಿಎಂ ಮಾಡಿ ಎಂದು ಅಹಿಂದ ಒಕ್ಕೂಟ ಆಗ್ರಹ

27 Nov 2025 8:48 PM IST

ರಾಜ್ಯದಲ್ಲಿ ತಲೆದೋರಿರುವ ನಾಯಕತ್ವ ಬಿಕ್ಕಟ್ಟು ಪರಿಹರಿಸುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರಾಜಕೀಯ ತಜ್ಞರು ಆರೋಪಿಸಿದ್ದಾರೆ. ಉತ್ತಮ ಕೆಲಸ ಮಾಡುವ ಭರವಸೆಯೊಂದಿಗೆ ಜನಾದೇಶ ಪಡೆದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕಾಗಿ ಕಚ್ಚಾಟ ನಡೆಸುತ್ತಿದೆ. ಇದೆಲ್ಲವನ್ನೂ ನೋಡಿಕೊಂಡು ಹೈಕಮಾಂಡ್‌ ಸುಮ್ಮನೆ ಕುಳಿತಿದೆ ಎಂದು ರಾಜಕೀಯ ವಿಶ್ಲೇಷಕ ಎಂ.ಸಿದ್ದರಾಜು ಆರೋಪಿಸಿದ್ದಾರೆ.