Save Lalbagh| ಲಾಲ್‌ಬಾಗ್‌ ಬಂಡೆಗೆ ಮಾತ್ರ ಆಪತ್ತಲ್ಲ, ಸುರಂಗ ಮಾರ್ಗ ರಚನೆ ಸಂಬಂಧ ತಜ್ಞರ ಸಮಿತಿ ರಚಿಸಿ: ಪ್ರಕಾಶ್ ಬೆಳವಾಡಿ

29 Oct 2025 10:30 AM IST

ಬೆಂಗಳೂರಿನ ಬಹುಚರ್ಚಿತ ಸುರಂಗ ಮಾರ್ಗ ಯೋಜನೆಯು ಅವೈಜ್ಞಾನಿಕ, ಅಪಾಯಕಾರಿ ಮತ್ತು ಅನಗತ್ಯ ದುಂದುವೆಚ್ಚವಾಗಿದೆ. ಈ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿರುವುದರ ಹಿಂದೆ ಸಂಶಯವಿದೆ ಎಂದು ನಟ, ನಿರ್ದೇಶಕ ಹಾಗೂ ಪರಿಸರ ಕಾಳಜಿ ಹೊಂದಿರುವ ಪ್ರಕಾಶ್ ಬೆಳವಾಡಿ ಅವರು ಆರೋಪಿಸಿದ್ದಾರೆ. ಈಗಾಗಲೇ ಯೋಜನೆಯನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿರುವ ಅವರು, 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಸುರಂಗ ಮಾರ್ಗ ಏಕೆ ಬೇಡ ಮತ್ತು ಬೆಂಗಳೂರಿನ ಸಂಚಾರ ದಟ್ಟಣೆಗೆ ಪರ್ಯಾಯ ಪರಿಹಾರಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.