ಟಾಕ್ಸಿಕ್ ಟೀಸರ್ ಕುಟುಂಬದ ಜೊತೆ ನೋಡುವಂತಿದೆಯೇ? ಮಹಿಳಾ ಆಯೋಗಕ್ಕೆ ದೂರು ನೀಡಿದ ಎಎಪಿ ನಾಯಕಿ!

15 Jan 2026 6:02 PM IST  ( Updated:2026-01-15 12:52:39  )

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಟೀಸರ್ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಕುಟುಂಬ ಸಮೇತ ಕುಳಿತು ನೋಡಲು ಸಾಧ್ಯವಿಲ್ಲದಂತಿವೆ ಎಂದು ಆಮ್ ಆದ್ಮಿ ಪಕ್ಷದ (AAP) ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. "ನಟ ಯಶ್ ಅವರು ಮೊದಲು ಈ ಟೀಸರ್ ಅನ್ನು ತಮ್ಮ ಕುಟುಂಬದವರ ಜೊತೆ ಕುಳಿತು ನೋಡಲಿ" ಎಂದು ಸವಾಲು ಹಾಕಿರುವ ಉಷಾ ಮೋಹನ್, ಇಂತಹ ದೃಶ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೂರು ನೀಡಲು ಕಾರಣವೇನು? ಟೀಸರ್‌ನಲ್ಲಿರುವ ಯಾವ ಅಂಶಗಳು ವಿವಾದಕ್ಕೆ ಕಾರಣವಾಗಿವೆ? ಉಷಾ ಮೋಹನ್ ಅವರ ಸಂಪೂರ್ಣ ಅಭಿಪ್ರಾಯವೇನು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.