ವಿಶ್ವಕಪ್ ಗೆದ್ದ 'ಚಿನ್ನದ ಹುಡುಗಿಯರ' ಯಶೋಗಾಥೆ: ಮಹಾಂತೇಶ್ ಜಿ.ಕೆ. ಹೇಳಿದ ರೋಚಕ ಸತ್ಯಗಳು
ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಅಭೂತಪೂರ್ವ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ, ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (CABI) ಅಧ್ಯಕ್ಷರು ಹಾಗೂ ಸಮರ್ಥನಂ ಟ್ರಸ್ಟ್‌ನ ಸಂಸ್ಥಾಪಕರಾದ ಡಾ. ಮಹಾಂತೇಶ್ ಜಿ.ಕೆ (Mahantesh Kivudasannavar) ಅವರ ವಿಶೇಷ ಸಂದರ್ಶನ ಇಲ್ಲಿದೆ.


