'ಅಪ್ಪು' ಅಗಲಿಕೆಯ ಆಘಾತ ಇಂದಿಗೂ ಮಾಸಿಲ್ಲ

29 Oct 2025 8:47 PM IST

ಪುನೀತ್ ರಾಜ್‌ಕುಮಾರ್‌ ಕೇವಲ ಒಂದು ಹೆಸರು ಅಥವಾ ಬಿರುದಾಗಿರಲಿಲ್ಲ. ಅದು ವಿನಯ, ಶಿಸ್ತು, ಮತ್ತು ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರಾಗಿತ್ತು. ಅವರ ನಗು, ನೃತ್ಯ, ಅಭಿನಯ ಎಲ್ಲವೂ ಸಿನಿಮಾದಲ್ಲಿ ಅಜರಾಮರ. ಆದರೆ, ತೆರೆಯ ಹಿಂದೆ ಮಾಡಿದ ಸಾಮಾಜಿಕ ಕಾರ್ಯಗಳೇ ಅವರಿಗೆ ನಿಜವಾದ ರಾಜರತ್ನ ಪದವಿ ತಂದುಕೊಟ್ಟಿದ್ದವು. ಪುನೀತ್‌ ರಾಜಕುಮಾರ್‌ ಅವರು ನುಡಿದಂತೆ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ವಕಾಲಿಕ ಆದರ್ಶರಾಗಿ ಬದುಕಿದರು. ಅಪ್ಪು ಬಾಳಿದ್ದು ಕೇವಲ 46 ವರ್ಷಗಳೇ ಇರಬಹುದು, ಆದರೆ ಅವರ ಆದರ್ಶ ಇಂದಿಗೂ ಅಮರವಾಗಿದೆ. ಈ ಕುರಿತ ವಿಡಿಯೋ ಇಲ್ಲಿದೆ