ಕಿಚ್ಚ ಸುದೀಪ್‌ ಕನಸಿನ ಬಿಗ್‌ಬಾಸ್‌ ಅರಮನೆ ಬಂದ್ ಮಾಡಿಸಿದ ಸರ್ಕಾರ, ಇದರ ಹಿಂದೆ ಯಾರಿದ್ದಾರೆ?

8 Oct 2025 1:53 PM IST

ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ವೇಲ್ಸ್ ಸ್ಟುಡಿಯೋಸ್‌ನಲ್ಲಿ, ಕನ್ನಡದ 12ನೇ ಬಿಗ್‌ಬಾಸ್ ಆವೃತ್ತಿಯ ಆಟಗಳು ಭರದಿಂದ ಸಾಗಿದ್ದವು. ಆದರೆ, ಈ ಅದ್ದೂರಿ ಮನೆ ನಿರ್ಮಾಣದಲ್ಲಿ ಪರಿಸರ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರನ್ನು ಬಳಸುತ್ತಿದ್ದರೂ, ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (STP) ನಿರ್ಮಿಸದ ಕಾರಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾತ್ರೋರಾತ್ರಿ ಸ್ಪರ್ಧಿಗಳು, ತಂತ್ರಜ್ಞರನ್ನು ಮನೆಯಿಂದ ಹೊರಕರೆದು, ಶೋವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಎಲ್ಲಾ ಸ್ಪರ್ಧಿಗಳನ್ನು ಸಮೀಪದ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.