ಪಟಾಕಿಯೇ ಶಾಪವಾಯ್ತು; ದೀಪಾವಳಿ ಬೆಳಕಲ್ಲಿ ಕತ್ತಲಾದ ಯುವಕರ ಬಾಳು
ನಾಡಿನಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಹಲವೆಡೆ ಪಟಾಕಿಗಳ ಸದ್ದು ಮೇಲೆ ಎಲ್ಲೆ ಮೀರಿದೆ. ಆದರೆ, ಹಲವರ ಬದುಕಲ್ಲಿ ಈ ಬೆಳಕಿನ ಹಬ್ಬವು ಕತ್ತಲೆ ಕವಿಯುವಂತೆ ಮಾಡಿದೆ. ಪಟಾಕಿ ಸಿಡಿತದ ವೇಳೆ ಗಾಯಗೊಂಡ ಹಲವರು ಬೆಂಗಳೂರಿನ ಮಿಂಟೋ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅನಾಹುತವು ಹಲವರ ದೃಷ್ಟಿಯನ್ನೇ ಕಿತ್ತುಕೊಂಡಿದೆ.
