LIVE | 'ಕಡಿಮೆ ಮಾಡಿಸದಿದ್ದರೆ ಕೇಳಿ': ಮೆಟ್ರೋ ದರ ಏರಿಕೆ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

5 Feb 2026 7:26 PM IST

ಬೆಂಗಳೂರು ಮೆಟ್ರೋ (BMRCL) ಪ್ರಯಾಣ ದರ ಏರಿಕೆ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಪತ್ರಿಕಾಗೋಷ್ಠಿಯಲ್ಲಿ ನೇರ ಸವಾಲು ಎಸೆದಿದ್ದಾರೆ. "ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರದ ಯಾವುದೇ ಪಾತ್ರವಿಲ್ಲ. ಒಂದು ವೇಳೆ ಕೇಂದ್ರದ ಪಾತ್ರವಿದೆ ಎಂದು ಸಾಬೀತುಪಡಿಸಿದರೆ ಅಥವಾ ನಮಗೆ ಪತ್ರ ಬರೆದರೆ, ನಾನು ಖುದ್ದಾಗಿ ದರ ಕಡಿಮೆ ಮಾಡಿಸುತ್ತೇನೆ" ಎಂದು ಸೂರ್ಯ ಗುಡುಗಿದ್ದಾರೆ. ಬಿಎಂಆರ್ ಸಿಎಲ್ ನಿರ್ಧಾರದ ಹಿಂದೆ ಯಾರಿದ್ದಾರೆ? ರಾಜಕೀಯ ಆರೋಪ-ಪ್ರತ್ಯಾರೋಪಗಳ ಅಸಲಿಯತ್ತೇನು? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.