Suvarna Soudha Session Day 2: ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆ ಮತ್ತು ರಾಜಕೀಯ ಜಟಾಪಟಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಹಲವು ಮಹತ್ವದ ಬೆಳವಣಿಗೆಗಳು ನಡೆದವು. ಮೊದಲ ದಿನ ಸಂತಾಪ ಸೂಚನೆಗೆ ಸೀಮಿತವಾಗಿದ್ದ ಕಲಾಪ, ಎರಡನೇ ದಿನ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಗಂಭೀರ ಚರ್ಚೆಗೆ ಸಾಕ್ಷಿಯಾಯಿತು. ಆದರೆ, ಸದನದ ಹೊರಗೆ ರಾಜಕೀಯ ಜಟಾಪಟಿ ಮತ್ತು ಪ್ರತಿಭಟನೆಗಳು ಜೋರಾಗಿದ್ದವು.


