ʼದ ಫೆಡರಲ್ ಕರ್ನಾಟಕʼದ ಭಾವನಮನ: ಕರುನಾಡಿನ ಹರಿಕಾರ ಎಸ್.ಎಂ. ಕೃಷ್ಣ ಇನ್ನು ಸವಿನೆನಪಷ್ಟೇ...
ಎಸ್ಎಂ ಕೃಷ್ಣ ಅವರ ರಾಜಕೀಯ ದಾರಿ ಸುಗಮವಾಗಿ ಏನೂ ಇರಲಿಲ್ಲ. ಹಲವಾರು ಏರಿಳಿತಗಳ ಕಂಡು ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯುನ್ನತ ಹುದ್ದೆಗೆ ಏರಿ ಖ್ಯಾತನಾಮರಾದವರು.
ಎಸ್ಎಂ ಕೃಷ್ಣ ಎಂದೇ ಖ್ಯಾತರಾಗಿದ್ದ ಸೋಮನಹಳ್ಳಿ ಮಲ್ಲಣ್ಣ ಕೃಷ್ಣ (ಎಸ್ ಎಂ ಕೃಷ್ಣ) ಅವರು ಈ ರಾಜ್ಯ ಕಂಡ ಅಪರೂಪದ ರಾಜಕಾರಣಿ ಹಾಗೂ ಮುತ್ಸದ್ಧಿ. ವಿಧಾನಸಭೆ ಸ್ಪೀಕರ್ (Speaker) ಆಗಿ, ಉಪಮುಖ್ಯಮಂತ್ರಿಯಾಗಿ (Deputy Chief Minister), ಮುಖ್ಯಮಂತ್ರಿಯಾಗಿ (Chief Minister), ಮಹಾರಾಷ್ಟ್ರದ ರಾಜ್ಯಪಾಲರಾಗಿ (Governor of Maharashtra) ಕಾರ್ಯನಿರ್ವಹಿಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವರೂ (Minister of External Affairs) ಆಗಿದ್ದರು. ಹೀಗೆ ಎಸ್.ಎಂ. ಕೃಷ್ಣ (SM Krishna) ಹಲವು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.