ತೆಲುಗು ರಾಜಕಾರಣಿಯ ಪಾತ್ರದಲ್ಲಿ ಶಿವಣ್ಣ: ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಗುಮ್ಮಡಿ ನರಸಯ್ಯ'

5 Nov 2025 2:08 PM IST

ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರು ಇದೀಗ ತೆಲುಗು ನೆಲದ ಶುದ್ಧ ರಾಜಕಾರಣಿ, 'ಜನರ ಮನುಷ್ಯ' ಎಂದೇ ಖ್ಯಾತರಾಗಿದ್ದ ಗುಮ್ಮಡಿ ನರಸಯ್ಯ ಅವರ ಬಯೋಪಿಕ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲಂಗಾಣದ ಯೆಲ್ಲೆಂದು ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಸರಳತೆಯನ್ನೇ ಮೈಗೂಡಿಸಿಕೊಂಡಿದ್ದ ಗುಮ್ಮಡಿ ನರಸಯ್ಯ ಅವರ ಜೀವನಗಾಥೆ ಇದಾಗಿದೆ. ವಿಧಾನಸಭೆಗೆ ಹೋಗಲು ಬಸ್ಸು, ಆಟೋ ಬಳಸುತ್ತಿದ್ದರು, ಸಂಬಳವನ್ನು ಪಕ್ಷಕ್ಕೆ ನೀಡುತ್ತಿದ್ದರು ಮತ್ತು ಕೃಷಿಯನ್ನೇ ನಂಬಿ ಬದುಕುತ್ತಿದ್ದರು. ಇಂತಹ ಅಪರೂಪದ ರಾಜಕಾರಣಿಯ ಪಾತ್ರಕ್ಕೆ ಶಿವಣ್ಣ ಜೀವ ತುಂಬುತ್ತಿದ್ದು, ಈ ಚಿತ್ರದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ...