ಸ್ವಯಂ ವೈದ್ಯ ಅಪಾಯಕಾರಿ: ಕೆಮ್ಮಿನ ಸಿರಪ್ ಬಳಸುವ ಮುನ್ನ ಪೋಷಕರು ಎಚ್ಚರಿಕೆ ವಹಿಸಬೇಕು: ತಜ್ಞ ಡಾ. ಸೈಯದ್ ಮುಜಾಹಿದ್

6 Oct 2025 6:00 PM IST

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳು ಸಾವನ್ನಪ್ಪಿದ ಘಟನೆಯು ದೇಶಾದ್ಯಂತ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ, ಮಕ್ಕಳಲ್ಲಿ ಸಾಮಾನ್ಯ ಕೆಮ್ಮು, ಜ್ವರ ಕಾಣಿಸಿಕೊಂಡಾಗ ಪೋಷಕರು ಅನುಸರಿಸಬೇಕಾದ ಕ್ರಮಗಳೇನು ಮತ್ತು ಸ್ವಯಂ ವೈದ್ಯ ಪದ್ಧತಿ ಎಷ್ಟು ಅಪಾಯಕಾರಿ ಎಂಬುವುದರ ಬಗ್ಗೆ ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ. ಸೈಯದ್ ಮುಜಾಹಿದ್ ಹುಸೇನ್ ಅವರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.