ಆರ್.ಎಸ್.ಎಸ್ ನೋಂದಣಿ ವಿವಾದ: ಪ್ರಿಯಾಂಕ್ ಖರ್ಗೆ ಪ್ರಶ್ನೆ; ಭಾಗವತ್​ ಉತ್ತರ, ವಾಸ್ತವವೇನು? ಸಂವಿಧಾನ ಏನು ಹೇಳುತ್ತದೆ?

16 Jun 2026 6:44 PM IST

ಆರ್‌ಎಸ್‌ಎಸ್ (RSS) ನೋಂದಣಿ ವಿವಾದ ಇದೀಗ ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರದಲ್ಲಿ ಹಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಣಿಯಾಗಿದೆಯೇ? ಗುರುದಕ್ಷಿಣೆ ರೂಪದಲ್ಲಿ ಸಂಗ್ರಹವಾಗುವ ಹಣದ ಲೆಕ್ಕಪತ್ರ ಎಲ್ಲಿದೆ? ಸಂಘದ ಸದಸ್ಯತ್ವ ವ್ಯವಸ್ಥೆ ಹೇಗಿದೆ? ಎಂಬ ಪ್ರಶ್ನೆಗಳು ರಾಜಕೀಯ ಮತ್ತು ಸಾಂವಿಧಾನಿಕ ಚರ್ಚೆಗೆ ನಾಂದಿ ಹಾಡಿವೆ. ಈ ವಿಡಿಯೊದಲ್ಲಿ ನಾವು ಆರ್‌ಎಸ್‌ಎಸ್‌ನ ಕಾನೂನು ಸ್ಥಿತಿ, ಭಾರತೀಯ ಸಂವಿಧಾನದ ವಿಧಿ 19(1)(c) ನೀಡುವ ಹಕ್ಕುಗಳು, ನೋಂದಣಿ ಕಡ್ಡಾಯವೇ ಅಥವಾ ಅಲ್ಲವೇ ಎಂಬ ವಿಚಾರಗಳನ್ನು ವಿವರವಾಗಿ ವಿಶ್ಲೇಷಿಸಿದ್ದೇವೆ. ಜೊತೆಗೆ, ಸಂಘ ಪರಿವಾರದ ಅಂಗಸಂಸ್ಥೆಗಳ ಕಾನೂನುಬದ್ಧ ವ್ಯವಸ್ಥೆ, 1948ರ ನಿಷೇಧ, 1949ರಲ್ಲಿ ಸಲ್ಲಿಸಲಾದ ಸಂಘದ ಸಂವಿಧಾನ ಹಾಗೂ ಮೋಹನ್ ಭಾಗವತ್ ಅವರ ಪ್ರತಿಕ್ರಿಯೆಯನ್ನೂ ಪರಿಶೀಲಿಸಿದ್ದೇವೆ. ಇದು ಕೇವಲ ನೋಂದಣಿ ಕುರಿತ ಪ್ರಶ್ನೆಯೇ? ಅಥವಾ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ನಡುವಿನ ಸೈದ್ಧಾಂತಿಕ ಸಂಘರ್ಷದ ಹೊಸ ಅಧ್ಯಾಯವೇ? ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು? ಕರ್ನಾಟಕ ರಾಜಕೀಯದ ಮೇಲೆ ಇದರ ಪರಿಣಾಮ ಏನು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ವಿಡಿಯೊದಲ್ಲಿದೆ.