613 ಕೋಟಿ ಬಾಡಿಗೆಯಲ್ಲಿ 200 ಕೋಟಿ ರೂ. ಕಮಿಷನ್? ಸರ್ಕಾರದ ವಿರುದ್ಧ ಮಾಜಿ ಮೇಯರ್ ಹರೀಶ್ ಗುಡುಗು
ಬೆಂಗಳೂರಿನ ರಸ್ತೆಗಳನ್ನು ಸ್ವಚ್ಛಗೊಳಿಸಲು 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷಗಳ ಅವಧಿಗೆ ಬರೋಬ್ಬರಿ 613.25 ಕೋಟಿ ರೂಪಾಯಿ ನೀಡಿ ಬಾಡಿಗೆಗೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ದುಬಾರಿ ಯೋಜನೆಗಿಂತ, ಹೊಸ ಯಂತ್ರಗಳನ್ನೇ ಖರೀದಿಸಬಹುದಿತ್ತು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಎದ್ದಿದೆ ಈ ಬೃಹತ್ ಯೋಜನೆಯಲ್ಲಿ ಸುಮಾರು ₹200 ಕೋಟಿ ಕಮಿಷನ್ ವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಬಿಬಿಎಂಪಿಯ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಎಸ್. ಹರೀಶ್, 'ದಿ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಯೋಜನೆಯನ್ನು 'ಜಗತ್ತಿನ 8ನೇ ಅದ್ಭುತ' ಎಂದು ವ್ಯಂಗ್ಯವಾಡಿರುವ ಅವರು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.


