x

ರಾಹುಲ್ ಗಾಂಧಿ GST ದರ ಪರಿಷ್ಕರಣೆಗೆ ಆಗ್ರಹಿಸಿದ್ದರು, ಈಗ ಮೋದಿ ಸರ್ಕಾರ ಮಾಡಿದೆ ಅಷ್ಟೇ ಎಂದ ಸಚಿವ ಸಂತೋಷ್ ಲಾಡ್

4 Sept 2025 6:19 PM IST

ಹಬ್ಬದ ಋತು ಆರಂಭಕ್ಕೂ ಮುನ್ನವೇ ದೇಶದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮಹತ್ವದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಕೂದಲಿನ ಎಣ್ಣೆಯಿಂದ ಹಿಡಿದು ಟಿವಿ, ಕಾರುಗಳವರೆಗೆ ಹಲವಾರು ದೈನಂದಿನ ಬಳಕೆಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಗಣನೀಯವಾಗಿ ಕಡಿತಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ದಿನವಿಡೀ ನಡೆದ ಸಭೆಯ ನಂತರ ಈ ಘೋಷಣೆ ಮಾಡಲಾಗಿದ್ದು, ಈ ನಿರ್ಧಾರಕ್ಕೆ ಎಲ್ಲಾ ರಾಜ್ಯಗಳಿಂದ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಈ ಹೊಸ ದರಗಳು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ.